ವಿಜಯಪುರ –
ಶಿಕ್ಷಕರ ದೀರ್ಘಕಾಲ ಸಮಸ್ಯೆಗಳ ಹೋರಾಟಕ್ಕಾಗಿ ನೌಕರ ಸಂಘದ ರಾಜ್ಯಾಧ್ಯಕ್ಷರಾದ ಷಡಕ್ಷರಿಯವರು ನವೆಂಬರ 7ರಂದು ಬೆಂಗಳೂರಿನ ನೌಕರ ಸಂಘದ ಸಭಾಂಗಣದಲ್ಲಿ ಸಭೆ ಕರೆದಿದ್ದು ತಮಗೆಲ್ಲ ಗೊತ್ತಿರುವ ವಿಷಯ.ಈ ಸಭೆಗೆ ಹೋಗಬಾರದೆಂದು ಶಿಕ್ಷಕ ಸಂಘದ ರಾಜ್ಯತಂಡದಲ್ಲಿ ಸ್ಥಾನ ಪಡೆದಿರುವ ವಿಜಯಪುರ ಜಿಲ್ಲೆಯ ಇಬ್ಬರು ನಾಯಕರು ಶತಾಯಗತಾಯ ಸಭೆಗೆ ನಿರ್ಬಂಧ ಹೇರಲು ಕಳೆದ ವಾರದಿಂದ ಪ್ರಯತ್ನಿಸುವ ಯತ್ನ ವಿಫಲವಾಗಿದೆ.
ಸ್ವತಃ ತಮ್ಮ ಸಂಘದ ಪ್ರತಿನಿಧಿಗಳೇ ಇವರ ವಿರುದ್ಧ ತಿರುಗಿ ಬಿದ್ದಿರುವುದು.ಶಿಕ್ಷಕ ಸಂಘದ ರಾಜ್ಯಘಟಕದ ಜಿಡ್ಡುಗಟ್ಟಿದ ನಡೆಯಿಂದ,ವರ್ತನೆಯಿಂದ ಬೇಸತ್ತು,ಅಪಾರ ಸಂಖ್ಯೆಯ ಪ್ರತಿನಿಧಿಗಳು ಶಿಕ್ಷಕರ ಕರೆದುಕೊಂಡು ಬೆಂಗಳೂರಿಗೆ ಹೋಗುತ್ತಿರುವದನ್ನು ನೋಡಿದರೆ ರಾಜ್ಯ ನಾಯಕರು ಇನ್ನಾದರೂ ನೌಕರ ಸಂಘದ ಮಾದರಿಯಲ್ಲಿ ಹೋರಾಟ ರೂಪಿಸಲು ಆಲೋಚಿಸಬೇಕೆಂದು ಶಿಕ್ಷಕರ ಪ್ರತಿಕ್ರಿಯೆ ಯಾಗಿದ್ದು ಇದೆಲ್ಲದರ ನಡುವೆ ವಿಜಯಪುರ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಈ ಒಂದು ಸಭೆಗೆ ಅಭೂತ ಪೂರ್ವ ಬೆಂಬಲ ವನ್ನು ಜಿಲ್ಲೆಯ ಶಿಕ್ಷಕರು ನೀಡಿದ್ದಾರೆ
ಇತ್ತೀಚಿಗೆ ಜಿಲ್ಲೆಯ ಜಿ,ಓ,ಸಿ,ಸಿ, ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿ ಸಿದನ್ನು ಪುನರಾವರ್ತಿಸಬಹುದಾಗಿದ್ದು ಸಂಘಟನೆ ಗಿಂತ ಶಿಕ್ಷಕರ ಸಮಸ್ಯೆ ಗಳೇ ಮಹತ್ವ ಎಂಬೊಂದನ್ನು ಈ ಒಂದು ಬೆಂಬಲ ದಿಂದ ಜಿಲ್ಲೆಯ ಶಿಕ್ಷಕರು ತೋರಿಸಿಕೊಟ್ಟಿದ್ದಾರೆ