ಬೆಂಗಳೂರು –
ಕಳೆದ ಮೂರು ನಾಲ್ಕು ದಿನಗಳಿಂದ ರಾಜ್ಯದಲ್ಲಿ ಬಿಟ್ಟು ಬಿಡಲಾರದೆ ಮಳೆರಾಯ ಧಾರಾಕಾರವಾಗಿ ಸುರಿಯುತ್ತಿದ್ದಾನೆ.ಈ ಒಂದು ಮಳೆ ಇನ್ನೂ ಮೂರು ದಿನಗಳ ಕಾಲ ಇದೆಯಂತೆ ಈಗಾಗಲೇ ಈ ಒಂದು ಮಳೆಯ ನಡುವೆ ಶಾಲೆಗೆ ಮಕ್ಕಳು ಬರದಿದ್ದರೂ ಕೂಡಾ ಶಿಕ್ಷಕರು ಮಾತ್ರ ತಪ್ಪದೆ ಶಾಲೆಗಳಿಗೆ ಹೋಗತಾ ಇದ್ದಾರೆ ಬರತಾ ಇದ್ದಾರೆ.ಪಇನ್ನೂ ಮಳೆಯ ನಡುವೆ ಶಾಲೆಗೆ ಹೋಗಲು ಶಿಕ್ಷಕರು ಸಾಕಷ್ಟು ಪ್ರಮಾಣದಲ್ಲಿ ಸಮಸ್ಯೆ ಯನ್ನು ಅನುಭವಿಸುತ್ತಿರುವ ಈ ಒಂದು ಸಮಸ್ಯೆಗೆ ಇದ್ದಿದ್ದು ಈ ಒಂದು ಸಮಸ್ಯೆ ಯನ್ನು ಅರಿತು ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಧಾರವಾಡ ಇವರು ಪತ್ರ ಬರೆದು ರಜೆ ನೀಡುವಂತೆ ಜಿಲ್ಲಾಧಿಕಾರಿ ಗಳಿಗೆ ಒತ್ತಾಯ ಮಾಡಿದ್ದರು.
ಇದರ ಬೆನ್ನಲ್ಲೇ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪರವಾಗಿ ಅವರು ಕೂಡಾ ರಜೆ ನೀಡುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಗಳಿಗೆ ಒತ್ತಾಯವನ್ನು ಮಾಡಿದ್ದರು.
ಈಗಾಗಲೇ ಶಿವಮೊಗ್ಗ ಜಿಲ್ಲಾಧಿಕಾರಿ ಗಳು ರಜೆಯನ್ನು ಘೋಷಣೆ ಮಾಡಿದ್ದು ಇತ್ತ ಬೆಳಗಾವಿ ಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗಳು ಕೂಡಾ ರಜೆಯನ್ನು ಘೋಷಣೆ ಮಾಡಿದ್ದಾರೆ.
ಇನ್ನೂ ಸಧ್ಯ ಧಾರಾಕಾರವಾಗಿ ಮಳೆರಾಯನ ಆರ್ಭಟ ಜೋರಾಗಿದ್ದು ಹೀಗಾಗಿ ಶಿಕ್ಷಣ ಸಚಿವರು ಮಳೆಯನ್ನಾದರೂ ನೋಡಿ ಶಿಕ್ಷಕರಿಗೆ ಶಾಲೆಗೆ ಹೋಗುವ ಬದಲಿಗೆ ಮನೆಯಂದಲೇ ಕೆಲಸ ಮಾಡಲು ಅವಕಾಶವನ್ನು ನೀಡಬೇಕು ಇಲ್ಲವಾದರೆ ಮತ್ತೊಂದು ಸಮಸ್ಯೆ ಎಡವಟ್ಟು ಆಗುವ ಮುನ್ನವೇ ಈ ಒಂದು ಕುರಿತು ಸೂಕ್ತವಾದ ಆದೇಶವನ್ನು ನೀಡುವಂತೆ ನಾಡಿನ ಶಿಕ್ಷಕರು ಒತ್ತಾಯವನ್ನು ಮಾಡಿದ್ದಾರೆ.