ಬೆಂಗಳೂರು –
KSPSTA ಶಿಕ್ಷಕರ ಸಂಘಕ್ಕೆ ವಾರ್ಷಿಕ ಎರಡು ನೂರು ರೂಪಾಯಿ ಸದಸ್ಯತ್ವ ನೀಡಲು ಶಿಕ್ಷಕರ ವಿರೋಧ.ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಪ್ರತಿವರ್ಷ ರಾಜ್ಯದ ಎಲ್ಲಾ ಶಿಕ್ಷಕರ ವೇತನದಲ್ಲಿ ಪ್ರತಿಯೊಬ್ಬ ಶಿಕ್ಷಕರ ವೇತನದಲ್ಲಿ ಕಟಾವಣೆ ಮಾಡುತ್ತಿದ್ದು, ಆದರೆ ಆ ಸಂಘದಿಂದ ಇದುವರೆಗೆ ಯಾವುದೇ ಶಿಕ್ಷಕರ ಉಪಯೋಗ ವಾಗಿಲ್ಲ ಹೀಗಾಗಿ ಈಬಾರಿ ವೇತನದಲ್ಲಿ ಕಟಾವಣೆ ಮಾಡಬೇಡಿ ಎಂದು ಶಿಕ್ಷಕರೊಬ್ಬರು ಪತ್ರವನ್ನು ಬರೆದಿದ್ದಾರೆ.
ಈವರೆಗೆ ಸಂಘದಿಂದ ಯಾವುದೇ ಕಾರ್ಯಕ್ರಮ ಗಳು ಆಗಿರುವುದಿಲ್ಲ ಜೊತೆಗೆ ಸತತ ಸುಮಾರು ವರ್ಷಗಳಿಂದ ಶಿಕ್ಷಕರ ವರ್ಗಾವಣೆ ಸಮಸ್ಯೆ ಹಾಗೂ ಸಿ & ಆರ್ ರೂಲ್ ಬಗ್ಗೆ ಆಗಲಿ,ಶಿಕ್ಷಕರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಆ ಸಂಘವು ಬೀದಿಗಿಳಿದು ಹೋರಾಟ ಮಾಡಿರುವುದಿಲ್ಲ ಆದ್ದರಿಂದ ರಾಜ್ಯದ ಯಾವುದೇ ಶಿಕ್ಷಕರು ಸದರಿ ಸಂಘಕ್ಕೆ ವಾರ್ಷಿಕ ಸದಸ್ಯತ್ವವನ್ನು ಕೊಡಬಾರದು ಎಂದು ಸವದತ್ತಿ ತಾಲೂಕಿನ ಶಿಕ್ಷಕ ಎಂ ಜಿ ಚರಂತಿಮಠ ಪತ್ರವನ್ನು ಬರೆದು ಆಗ್ರಹಿಸಿದರು
ಅಲ್ಲದೇ ನಿವೃತ್ತಿಗೆ ಐದು ವರ್ಷದೊಳಗೆ ಇರುವ ಶಿಕ್ಷಕರು ತಮ್ಮ ಸದಸ್ಯತ್ವವನ್ನು ಯಾವುದೇ ಕಾರಣಕ್ಕೂ ಕೊಡಬೇಡಿ ಏಕೆಂದರೆ ಮುಂದಿನ ಅವದಿಗೆ ಆ ಸಂಘಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಅಥವಾ ಮತ ಚಲಾಯಿಸುವ ಅಧಿಕಾರ ಸಹವಿರು ವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಚರಂತಿಮಠ ಆಗ್ರಹಿಸಿದರು ಗ್ರಾಮೀಣ ಶಿಕ್ಷಕರ ಸಂಘ ಮತ್ತು ಕರ್ನಾಟಕ ರಾಜ್ಯ ಶಿಕ್ಷಕರ ಸಂಘಗಳ ಪರಿಷತ್ತು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದು ಇವೆಲ್ಲದರ ನಡುವೆ ಏನೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು.