ಬೆಂಗಳೂರು –
ಕಳೆದ ಹಲವು ದಿನಗಳಿಂದ ಕಾರಣಾಂತರಗಳಿಂದ ನೆನೆಗುದಿಗೆ ಬಿದ್ದಿದ್ದ ಶಿಕ್ಷಕರ ವರ್ಗಾವಣೆಗೆ ಕೊನೆಗೂ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಹೌದು ವಿವಿಧ ಕಾರಣಗಳಿಂದಾಗಿ ಸ್ಥಗಿತಗೊಂಡಿದ್ದಂತ ಶಿಕ್ಷಕರ ವರ್ಗಾವಣೆಗೆ ಜೂನ್ 30, 2021ರಿಂದ ಆರಂಭಗೊಳ್ಳಲಿದೆ ಇನ್ನೂ ಪ್ರಮುಖವಾಗಿ ವರ್ಗಾ ವಣೆಯಲ್ಲಿ ಅರ್ಜಿ ಸಲ್ಲಿಸೋ ಮೊದಲು ಜೂನ್.30, 2021ರ ಒಳಗೆ ಶಿಕ್ಷಕರು ಕಡ್ಡಾಯವಾಗಿ ಶಿಕ್ಷಕರ ಸೇವಾ ಮಾಹಿತಿಯನ್ನು ಪರಿಶೀಲಿಸಿ, ಶಿಕ್ಷಕ ಮಿತ್ರ ( EEDS) ತಂತ್ರಾಂಶದಲ್ಲಿ ಇಂದೀಕರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿ ಆದೇಶವನ್ನು ಹೊರಡಿಸಿದೆ. ಒಂದು ವೇಳೆ ಹೀಗೆ ಮಾಡದಿದ್ದರೇ ವರ್ಗಾವಣೆ ಬಯಸುವಂತ ಶಿಕ್ಷಕರಿಗೆ ತೊಂದರೆ ಉಂಟಾಗಲಿದೆ ಎಂದು ತಿಳಿಸಿದೆ.

ಅತ್ತ ಶಿಕ್ಷಣ ಸಚಿವರು ವರ್ಗಾವಣೆ ಕುರಿತು ಮಾಹಿತಿ ನೀಡುತ್ತಿದ್ದಂತೆ ಇತ್ತ ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ವಿ ಅನ್ಬುಕುಮಾರ್ ಸುತ್ತೋಲೆ ಹೊರಡಿಸಿ ಆದೇಶವನ್ನು ಹೊರಡಿಸಿ ದ್ದಾರೆ.

ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲಾ ಸಹ ಶಿಕ್ಷಕರು, ಮುಖ್ಯ ಶಿಕ್ಷಕರು ಹಾಗೂ ಬೋಧ ಕೇತರ ಸಿಬ್ಬಂದಿಗಳ ಸೇವಾ ಮಾಹಿತಿಯನ್ನು ಶಿಕ್ಷಕ ಮಿತ್ರ (EEDS) ತಂತ್ರಾಂಶದಲ್ಲಿ ಇಂದೀಕರಿಸಲು ಸಾಕಷ್ಟು ಕಾಲಾವಕಾಶಗಳನ್ನು ನೀಡಲಾಗಿದ್ದರೂ ಸಹ, ಹಲವಾರು ಡಿಡಿಓಗಳು ತಮ್ಮ ಅಧೀನ ಶಾಲೆ, ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಥ ಮಿಕ,ಪ್ರೌಢ ಶಾಲಾ ವೃಂದದ ಶಿಕ್ಷಕರು,ಮುಖ್ಯ ಶಿಕ್ಷಕ ರುಗಳು ಹಾಗೂ ಬೋಧಕೇತರ ಸಿಬ್ಬಂದಿಗಳ ಮಾಹಿ ತಿ ತಿದ್ದುಪಡಿ ಕೋರಿ ಮನವಿಗಳನ್ನು ಸಲ್ಲಿಸಿರುತ್ತಾರೆ ಎಂಬ ಉಲ್ಲೇಖವನ್ನು ಮಾಡಿದ್ದಾರೆ

ಈ ಹಿನ್ನಲೆಯಲ್ಲಿ ದಿನಾಂಕ 30-06-2021 ರೊಳಗೆ ಶಿಕ್ಷಕ ಮಿತ್ರ ತಂತ್ರಾಂಶದಲ್ಲಿ ಎಲ್ಲಾ ಮಾಹಿತಿಗಳನ್ನು ತಿದ್ದುಪಡಿ ಮಾಡಲು ತಿಳಿಸಿದೆ ಎಂದು ಆಯುಕ್ತರು ಹೇಳಿ ಆದೇಶವನ್ನು ಮಾಡಿದ್ದಾರೆ. ನಂತರ ಬಂದ ಯಾವುದೇ ಮಾಹಿತಿ ತಿದ್ದುಪಡಿಗೆ ಅವಕಾಶ ಕಲ್ಪಿಸ ಲಾಗುವುದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ ಇಲಾಖೆಯ ಆಯುಕ್ತರಾದ ಅನ್ವಕುಮಾರ್ ಅವರು