ಸ್ವಂತ ಜಿಲ್ಲೆಗೆ ವರ್ಗಾವಣೆ ಬೇಡಿಕೆ ಇಟ್ಟ ಶಿಕ್ಷಕರು – ರಾಜ್ಯದ ಶಿಕ್ಷಕರ ಧ್ವನಿಯಾಗಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒತ್ತಾಯ…..

Suddi Sante Desk

ಬೆಂಗಳೂರು –

ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಸುಮಾರು ವರ್ಷಗಳಿಂದ ಸುಸೂತ್ರವಾಗಿ ನಡೆಯು ತ್ತಿಲ್ಲ ಅವೈಜ್ಞಾನಿಕ ನಿಯಮಗಳು ವರ್ಗಾವಣೆಗೆ ಅಡ್ಡಿ ಮಾಡುತ್ತಾ ಬಂದಿವೆ ಶಿಕ್ಷಕರ ವರ್ಗಾವಣೆ ವಿಷಯದಲ್ಲಿ ಸಾಕಷ್ಟು ಶಿಕ್ಷಕರು ಕುಟುಂಬಗಳು ತೊಂದರೆ ಅನುಭವಿಸುತ್ತಿದ್ದಾರೆ ಇದೆಲ್ಲವನ್ನು ಮನಗಂಡ ಶಿಕ್ಷಕರು ಪಶ್ಚಿಮ ಬಂಗಾಳದ ಮಾದರಿ ಯಲ್ಲಿ ಒಮ್ಮೆ ಸ್ವಂತ ಜಿಲ್ಲೆಗೆ ಬೇಡಿಕೆ ಇಟ್ಟಿದ್ದಾರೆ. ರಾಜ್ಯದ ಗ್ರಾಮೀಣ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಸಂಘದವರು ನಾಡಿನ ಶಿಕ್ಷಕರ ಧ್ವನಿಯಾಗಿ ಒತ್ತಾಯ ಮಾಡಿದ್ದಾರೆ

(ಒನ್ ಟೈಮ್ ಸೆಟ್ಲಮೆಂಟ್) ವರ್ಗಾವಣೆ ಮಾಡಿ ದರೆ ಮಾನಸಿಕವಾಗಿ ದೈಹಿಕವಾಗಿ ನಾವು ಕೆಲಸ ನಿರ್ವಹಿಸಲು ಅನುಕೂಲವಾಗುತ್ತದೆ ಹೀಗಾಗಿ ರಾಜ್ಯದ ಮೂಲೆಮೂಲೆಗಳಿಂದ ಶಿಕ್ಷಕರು ಈ ಬೇಡಿಕೆಯಿಟ್ಟಿದ್ದಾರೆ.ಈಗಾಗಲೇ ನಮ್ಮ ನೌಕರ ಸಂಘದ ಅಧ್ಯಕ್ಷರಾದ ಸಿ ಎಸ್ ಷಡಕ್ಷರಿಯವರು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶಂಭುಲಿಂಗನಗೌಡ ಪಾಟೀಲ್ ಮಾನ್ಯ ಶಿಕ್ಷಣ ಸಚಿವರ ಸಪ್ಟೆಂಬರ್ ಒಂದರ ಸಭೆಯಲ್ಲಿ (ಒನ್ ಟೈಮ್ ಸೆಟ್ಲ್ ಮೆಂಟ್ )ಸ್ವಂತ ಜಿಲ್ಲೆಗೆ ವರ್ಗಾವಣೆ ನೀಡುವ ನಿರ್ಧಾರಕ್ಕೆ ಬಂದರೆ ಶಿಕ್ಷಕರ ವರ್ಗಾವಣೆ ಸಮಸ್ಯೆ ಮುಗಿಯುತ್ತದೆ ರಾಜ್ಯದ ಎಲ್ಲಾ ಶಿಕ್ಷಕರು ಈ ಒಂದು ಸಭೆಯಲ್ಲಿ ಕೈಗೊಳ್ಳುವ ನಿರ್ಣಯಕ್ಕೆ ಕಾತು ರರಾಗಿ ಕಾಯುತ್ತಿದ್ದಾರೆ ನಮ್ಮ ನೌಕರರ ಸಂಘದ ವರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ಶಿಕ್ಷಕರಿಗೆ ಈ ನ್ಯಾಯಯುತ ಬೇಡಿಕೆಯನ್ನು ಈಡೇರಿ ಸಲು ಮಾನ್ಯ ಶಿಕ್ಷಣ ಸಚಿವರಿಗೆ ಮನವರಿಕೆ ಮಾಡಿ ಕೊಡಬೇಕೆಂದು ಗ್ರಾಮೀಣ ಪ್ರೌಢಶಾಲಾ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷರಾದ ಪವಾಡೆಪ್ಪ ಹಾಗೂ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ರಾದ ಅಶೋಕ್ ಸಜ್ಜನ್ ಆಗ್ರಹ ಪಡಿಸಿ ಒತ್ತಾಯ ಮಾಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.