ರಾಯಚೂರು –
ಇಂದಿನಿಂದ ಮತ್ತೆ ಶಿಕ್ಷಕರ ವರ್ಗಾವಣೆ ಆರಂಭಗೊಂಡಿದ್ದು ಒಂದು ಕಡೆ ಶಿಕ್ಷಕರ ವರ್ಗಾವಣೆ ಮತ್ತೊಂದು ಕಡೆಗೆ ವರ್ಗಾವಣೆಯಲ್ಲಿ ಸಿಗದ ಅವಕಾಶದಿಂದ ಬೇಸತ್ತ ಶಿಕ್ಷಕರು ಸಿಡಿದೆದ್ದಿದ್ದಾರೆ. ಹೌದು ಈ ಒಂದು ವರ್ಗಾವಣೆಯಲ್ಲಿ ಸರಿಯಾಗಿ ಸಿಗದ ನ್ಯಾಯ ಮತ್ತು ಅವಕಾಶದಿಂದ ಬೇಸತ್ತ ಶಿಕ್ಷಕರು ರಾಯಚೂರಿನಲ್ಲಿ ಪ್ರತಿಭಟನೆ ಮಾಡಿದರು.
ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದ್ದ ಜಿಲ್ಲಾ ಉಪನಿರ್ದೇ ಶಕರ ಕಚೇರಿಯ ಮುಂದೆ ವರ್ಗಾವಣೆಯ ವಂಚಿತಗೊಂಡ ಶಿಕ್ಷಕರು ಸಾಮೂಹಿಕವಾಗಿ ಪ್ರತಿಭಟನೆ ಮಾಡಿದರು.
ಕಚೇರಿಯ ಮುಂದೆ ಸಾಮೂಹಿಕವಾಗಿ ಕುಳಿತುಕೊಂಡು ಪ್ರತಿಭಟನೆ ಮಾಡಿ ಆಕ್ರೋಶವನ್ನು ವ್ಯಕ್ತಪಡಿಸಿದರು.
ದಿಕ್ಕಾರ ದಿಕ್ಕಾರ ಎನ್ನುತ್ತಾ ಘೋಷಣೆಗಳನ್ನು ಕೂಗಿ ಈ ಒಂದು ವರ್ಗಾವಣೆ ಮಾಡುತ್ತಿರುವ ಇಲಾಖೆಯ ಮತ್ತು ಸಂಘಟನೆಯ ನಾಯಕರ ವಿರುದ್ದ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಇದರೊಂದಿಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಬೇಕೆ ಬೇಕೆ ನ್ಯಾಯ ಬೇಕು ಎನ್ನುತ್ತಾ ಈ ಒಂದು ಅವೈಜ್ಞಾ ನಿಕವಾದ ವರ್ಗಾವಣೆಯ ನೀತಿಯ ವಿರುದ್ದ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.