ಬೆಂಗಳೂರು –
ಯಾರಿಗೂ ಯಾವ ಇಲಾಖೆಗೂ ಇಲ್ಲದ ಈ ಒಂದು ಅವೈಜ್ಞಾನಿಕವಾದ ಶಿಕ್ಷಕರ ವರ್ಗಾವಣೆಯಿಂದ ರಾಜ್ಯದ ಅದೇಷ್ಟೊ ಶಿಕ್ಷಕರು ನೊಂದುಕೊಂಡಿದ್ದು ಇನ್ನೂ ಈ ವರ್ಗಾವಣೆಯ ವಿಚಾರದಲ್ಲಿ ಶಿಕ್ಷಕರೊಬ್ಬರು ಶಿಕ್ಷಣ ಸಚಿವರಿಗೆ ಸಂದೇಶ ಕಳಿಸಿದ್ದಾರೆ.

ಹೌದು ಪ್ಲೀಸ್ ಸರ್ ಏಪ್ರಿಲ್ ತಿಂಗಳಲ್ಲಿ ಮ್ಯೂಚವಲ್ ವರ್ಗಾವಣೆ ಮಾಡಿ ನಮ್ಮನ್ನು ಕಾಪಾಡಿ ಕೋರ್ಟ್ ಗೆ ಹೋಗಿ ತಡೆಯಾಜ್ಞೆ ತರುವವರಿದ್ದಾರೆ ಪರಸ್ಥಿತಿ ತುಂಬಾ ಶೋಚನೀಯವಾಗಿದೆ ಸರ್ ಹೀಗೆ ಉಲ್ಲೇಖವನ್ನು ಮಾಡಿ ಶಿಕ್ಷಕರೊಬ್ಬರು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರಿಗೆ ಸಂದೇಶವನ್ನು ಕಳಿಸಿ ವರ್ಗಾವಣೆಗಾಗಿ ಒತ್ತಾಯವನ್ನು ಮಾಡಿದ್ದಾರೆ.

ನೊಂದುಕೊಂಡಿರುವ ಶಿಕ್ಷಕರ ಸಂದೇಶವನ್ನು ನೋಡಿ ಯಾದ್ರು ಶಿಕ್ಷಣ ಸಚಿವರು ಕೂಡಲೇ ಸ್ಪಂದಿಸಿ ವರ್ಗಾವ ಣೆಯ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ನೆರವಾಗುತ್ತಾರೆನಾ ಎಂಬುದನ್ನು ಕಾದು ನೋಡಬೇಕಿದೆ.





















