ಬೆಂಗಳೂರು –
ಒಟಿಎಸ್ ಹಾಗೂ ವರ್ಗಾವಣೆಯಲ್ಲಿ ಶೇ 25 ತಗೆಯು ವಂತೆ ಒತ್ತಾಯಿಸಿ ವರ್ಗಾವಣೆ ವಂಚಿತ ಶಿಕ್ಷಕರು ಬೆಂಗಳೂ ರಿನಲ್ಲಿ ಹೋರಾಟ ಆರಂಭ ಮಾಡಿದ್ದಾರೆ.ಹೌದು ರಾಜ್ಯದ ಮೂಲೆ ಮೂಲೆಗಳಿಂದ ಬೆಂಗಳೂರಿಗೆ ಶಿಕ್ಷಕರು ಆಗಮಿ ಸಿದ್ದು ನಗರದ ಸರ್ಕಾರಿ ನೌಕರರ ಭವನದಲ್ಲಿ ಹೋರಾಟ ವನ್ನು ಮಾಡುತ್ತಿದ್ದಾರೆ.
ಸಧ್ಯ ಬೇಸಿಗೆ ರಜೆ ಹಿನ್ನಲೆಯಲ್ಲಿ ನೂರಾರು ಸಂಖ್ಯೆಯಲ್ಲಿ ಶಿಕ್ಷಕರು ಬೆಂಗಳೂರಿಗೆ ಆಗಮಿಸಿದ್ದು ಗ್ರಾಮೀಣ ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ , ನಾರಾ ಯಣಸ್ವಾಮಿ ಹಾಗೂ ಬೆಂಗಳೂರು ಚಲೋ ವೇದಿಕೆಯ ನೇತ್ರತ್ವದಲ್ಲಿ ಈ ಒಂದು ಹೋರಾಟವನ್ನು ಸ್ವಯಂ ಪ್ರೇರಿತ ವಾಗಿ ಶಿಕ್ಷಕರು ಹೋರಾ ಟಕ್ಕೆ ಕರೆ ಕೊಟ್ಟಿದ್ದಾರೆ
ಹೀಗಾಗಿ ಬೆಂಗಳೂರು ಚಲೋ ಆರಂಭಗೊಂಡಿದ್ದು ನಗರಕ್ಕೆ ಆಗಮಿಸಿರುವ ಶಿಕ್ಷಕರು ಸರ್ಕಾರಿ ನೌಕರರ ಭವನದಲ್ಲಿ ಹೋರಾಟ ಮಾಡುತ್ತಿದ್ದಾರೆ.ಮೊದಲನೇಯ ದಿನವಾದ ಇಂದು ಐದನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟದಲ್ಲಿ ಶಿಕ್ಷಕರು ಪಾಲ್ಗೊಂಡಿದ್ದಾರೆ
ನಾಳೆಯೂ ಕೂಡಾ ಹೋರಾಟವನ್ನು ಮುಂದುವರೆಸಲಿದ್ದು ನಾಳೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ರುವ ಷಡಾಕ್ಷರಿ ಅವರು ಇವರನ್ನು ಭೇಟಿ ಮಾಡಲಿದ್ದು ಇನ್ನೂ ಮತ್ತಷ್ಟು ಶಿಕ್ಷಕರು ಕೂಡಾ ನಾಳೆ ಈ ಒಂದು ಹೋರಾಟದಲ್ಲಿ ಪಾಲ್ಗೊಂಡು ಮತ್ತಷ್ಟು ಶಕ್ತಿಯನ್ನು ತುಂಬಲಿದ್ದಾರೆ.