ಮುಳಬಾಗಿಲು –
ಶಾಲೆ ಆರಂಭಗೊಂಡರು ಇನ್ನೂ ಗ್ರಾಮೀಣ ಭಾಗದ ಶಾಲೆಗಳಿಗೆ ತೆರಳಲು ಸಾರಿಗೆ ವ್ಯವಸ್ಥೆ ಇಲ್ಲದೇ ಅನನುಕೂಲವಾಗಿದೆ.ಕೂಡಲೇ ಬಸ್ ವ್ಯವಸ್ಥೆ ಮಾಡಿಕೊಡಬೇಕೆಂದು ಚಿಕ್ಕಬಳ್ಳಾಪುರದ ಮುಳ ಬಾಗಿಲು ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ನಗರದ KSRTC ಕಡಿಪೊ ಮ್ಯಾನೇಜರ್ ದಯಾನಂದ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸಂಘದ ಅಧ್ಯಕ್ಷ ಎಚ್. ವೆಂಕಟಗಿರಿಯಪ್ಪ ಮಾತನಾಡಿ ಗಡಿ ಪ್ರದೇಶಗಳಾದ ಬ್ಯಾಡರಹಳ್ಳಿ, ಹೊನ್ನಿಕೆರೆ, ಸುಣ್ಣಪಕುಂಟೆ ನಾಚಹಳ್ಳಿ, ಪುಲಿಪಾಪೇ ನಹಳ್ಳಿ, ಅಂಕಿ ರೆಡ್ಡಿ ಹೊಸಹಳ್ಳಿ,ತಾತಿಗಟ್ಟ, ಅಂಬ್ಲಿ ಕಲ್, ಹೆಬ್ಬಣಿ ಕಡೆಗೆ ಶಿಕ್ಷಕಿ ಯರು ಹೋಗಿ ಬರಲು ಬಹಳಷ್ಟು ತೊಂದರೆಯಾಗುತ್ತಿದೆ.ಮನವಿ ಸ್ವೀಕರಿ ಸಿದ ಡಿಪೊ ಮ್ಯಾನೇಜರ್ ದಯಾನಂದ್ ಮಾತ ನಾಡಿ, ಶಿಕ್ಷಣದಿಂದ ವಿದ್ಯಾರ್ಥಿಗಳು ಉತ್ತಮ ಮೌಲ್ಯ ರೂಪಿಸಿಕೊಳ್ಳಲು ಸಾಧ್ಯ.ಇಂತಹ ಸಂದರ್ಭ ದಲ್ಲಿ ಶಿಕ್ಷಕರು ತೆರಳಲು ಅನನುಕೂಲವಾಗಿರುವ ಮಾರ್ಗಗಳ ಬಗ್ಗೆ ನನಗೆ ಮಾಹಿತಿ ಕೊಟ್ಟರೆ ಕೂಡಲೇ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು