ಬೆಂಗಳೂರು –
C & R ವಿಚಾರದಲ್ಲಿ ನ್ಯಾಯಾಲಯದ ಮೆಟ್ಟಿಲು ನಿರ್ಧಾರ ಕೈಗೊಂಡ ಶಿಕ್ಷಕರು – ಅನ್ಯಾಯದ ವಿರುದ್ದ ಸಿಡಿದೆದ್ದು ಹೋರಾಟಕ್ಕೆ ಮುಂದಾಗಿ ಸಹಕಾರ ಕೋರಿದ ಹೋರಾಟಗಾರರು ಹೌದು ಸಿ ಆಂಡ್ ಆರ್ ದಲ್ಲಿ ಅನ್ಯಾಯವಾಗುತ್ತಿರುವ ವಿಚಾರ ಕುರಿತಂತೆ ಶಿಕ್ಷಕರು ಅಸಮಾಧಾನಗೊಂ ಡಿದ್ದಾರೆ.ಹೌದು ಈಗಾಗಲೇ ಈ ಒಂದು ವಿಚಾರ ದಲ್ಲಿ ಸಾಕಷ್ಟು ಬಾರಿ ಹೋರಾಟ ಮಾಡಿ ಪ್ರಶ್ನೆ ಮಾಡಿದರು ಕೂಡಾ ಈವರೆಗೆ ಯಾರು ಕೂಡಾ ಸ್ಪಂದಿಸುತ್ತಿಲ್ಲ ನ್ಯಾಯ ಕೂಡಾ ಸಿಗುತ್ತಿಲ್ಲ ಹೀಗಾಗಿ ಸಧ್ಯ ಬೇಸತ್ತಿರುವ ಶಿಕ್ಷಕರು ನ್ಯಾಯಾಲ ಯದ ಮೆಟ್ಟಿಲು ಹತ್ತಲು ನಿರ್ಧಾರವನ್ನು ಕೈಗೊಂ ಡಿದ್ದಾರೆ.
ಸಿ & ಆರ್ ಕುರಿತು ನ್ಯಾಯಾಲಯದ ಮೆಟ್ಟಿಲು ಹತ್ತಲು ನಿರ್ಧರಿಸಿದ್ದು ಆಸಕ್ತರು ಸಹಕರಿಸುವಂತೆ ಹೋರಾಟದ ಹಾದಿಯ ಮುಂಚೂಣಿಯಲ್ಲಿರುವ ಶಿಕ್ಷಕರು ಅನ್ಯಾಯಕ್ಕೊಳಗಾಗಿರುವ ನಾಡಿನ ಶಿಕ್ಷಕರಲ್ಲಿ ಕೋರಿದ್ದಾರೆ.ನ್ಯಾಯಾಲಯದಲ್ಲಿ ನಮ್ಮ ಹೋರಾಟ ಸಿ & ಆರ್, GPT ನೇಮಕಾತಿ ವಿರುದ್ದ ಅಲ್ಲ ಸಿ & ಆರ್ ನಲ್ಲಿ PST ಮತ್ತು GPT ಅನ್ನುವ ಪದ ಕೈ ಬಿಡಬೇಕು ಒಂದರಿಂದ 7 ಮತ್ತು 8 ನೇ ತರಗತಿಗೆ ಬೋಧನೆ ಮಾಡುವ ಎಲ್ಲಾ ಶಿಕ್ಷಕ ರನ್ನು ಪ್ರಾಥಮಿಕ ಶಾಲಾ ಶಿಕ್ಷಕರು ಎಂದು ಪರಿಗ ಣಿಸಬೇಕು,
ಪ್ರಾಥಮಿಕ ಮತ್ತು ಕಿರಿಯ ಪ್ರಾಥಮಿಕ ಒಳ ಗೊಂಡು NCTE ನಿಯಮದ ಪ್ರಕಾರ ಯಾರು ಪದವಿ ಪಡೆದಿಲ್ಲವೋ ಅಂಥ ಶಿಕ್ಷಕರು ಪದವಿ ಪಡೆಯಲು ಕಾಲಾವಕಾಶ ನೀಡಬೇಕು.ಹಾಗೇ ಇದರೊಂದಿಗೆ ಮುಂದಿನ ಎಲ್ಲಾ ಬಡ್ತಿಗೂ ಪದವಿ ಮತ್ತು ಸೇವಾ ಹಿರಿತನವನ್ನು ಪರಿಗಣಿಸಬೇಕು ಹೀಗೆ ಕೆಲವೊಂದಿಷ್ಟು ಬೇಡಿಕೆಗಳನ್ನು ಮುಂದಿ ಟ್ಟುಕೊಂಡು ಹೋರಾಟದ ಹಾದಿಯನ್ನು ತುಳಿದಿ ದ್ದಾರೆ
ಅನ್ಯಾಯಕ್ಕೊಳಗಾಗಿರುವ ನಾಡಿನ ಶಿಕ್ಷಕರು ಇದರೊಂದಿಗೆ ಈ ಒಂದು ವಿಚಾರದಲ್ಲಿ ಸಲಹೆ ಸಹಕಾರವನ್ನು ಕೋರುತ್ತಿದ್ದೇವೆ ಎನ್ನುತ್ತಾ ನಿಮ್ಮ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂಬ ಮಾತುಗಳನ್ನು ಎಂದಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..