ಅಫಜಲಪುರ –
ಪದವಿ, ಸ್ನಾತ್ತಕೋತ್ತರ ಪದವಿ ಮುಗಿಸಿದ ಶಿಕ್ಷಕರನ್ನು 1ರಿಂದ 5ನೇ ತರಗತಿ ವರೆಗೆ ಸಿಮಿತಗೊಳಿಸಿದ್ದನ್ನು ವಿರೋಧಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಶಿಕ್ಷಕರು ಪ್ರತಿಭಟನೆ ಮಾಡಿದರು.ಹೌದು ಬೀದರ್ ಜಿಲ್ಲೆಯ ಅಫಜಲಪುರದಲ್ಲಿ ಶಿಕ್ಷಕರು ಪ್ರತಿಭಟನೆ ಮಾಡಿದರು ಪಟ್ಟಣದ ಬಿಇಓ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಬಳಿಕ ಮನವಿ ಪತ್ರ ಸಲ್ಲಿಸಿದರು.ಇದೇ ವೇಳೆ ಸಂಘದ ತಾಲೂಕು ಅಧ್ಯಕ್ಷ ಗಾಂಧಿ ದಫೇದಾರ ಮಾತನಾಡಿ 2017ರಲ್ಲಿ ಶಿಕ್ಷಕರ ನೇಮಕಾತಿ ನಿಯಮಗಳನ್ನು ಬದಲಾಯಿಸಿ 1ರಿಂದ 5ನೇ ತರಗತಿ ಹಾಗೂ 6 ರಿಂದ 8 ನೇ ತರಗತಿ ಎಂದು ಪ್ರಾಥಮಿಕ ಶಿಕ್ಷಣ ವಿಭಾಗದಲ್ಲಿ ಎರಡು ಭಾಗ ಮಾಡಿದ್ದಾರೆ.1ರಿಂದ 5ನೇ ತರಗತಿಗಳಿಗೆ ಬೋಧಿ ಸುವ ಪ್ರಾಥಮಿಕ ಶಾಲಾ ಶಿಕ್ಷಕರೆಂದು ಹಾಗೂ 6ರಿಂದ 8ನೇ ತರಗತಿಗೆ ಪಾಠ ಮಾಡುವ ಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಿಕ್ಷಕರೆಂದು ಕರೆಯ ಲಾಗಿತ್ತು 2017 ರ ಸಿ ಮತ್ತು ಆರ್ ಬದಲಾವಣೆಗೂ ಮುನ್ನ 1ರಿಂದ 8ನೇ ತರಗತಿಗಳಿಗೆ ಸುಮಾರು ವರ್ಷಗಳಿಂದ ಪ್ರಾಥಮಿಕ ಶಾಲಾ ಶಿಕ್ಷಕರೇ ಕಾರ್ಯ ನಿರ್ವಹಿಸಿದ್ದರು ಎಂದರು

ಎಲ್ಲ ಶಿಕ್ಷಕರು ಪದವಿ ಸ್ನಾತಕ ಪದವಿ ಮುಗಿಸಿದ್ದಾರೆ. ಈಗ ಇವರಿಗೆಲ್ಲ ಹಿಂಬಡ್ತಿ ನೀಡಿದ್ದರಿಂದ ಬಹಳಷ್ಟು ಅನ್ಯಾಯವಾಗಿದೆ.ಈ ಬಗ್ಗೆ ಸರ್ಕಾರ ಇನ್ನೊಮ್ಮೆ ಯೋಚಿಸಿ ನಿರ್ಧಾರ ಹಿಂಪಡೆಯಬೇಕೆಂದು ಒತ್ತಾಯಿಸಿದರು.ಸಂಘದ ಪ್ರಧಾನ ಕಾರ್ಯದರ್ಶಿ ಸಂಗಮನಾಥ ಮ್ಯಾಳೇಶಿ, ಗುರುಶಾಂತಯ್ಯ ಸ್ವಾಮಿ ಶಿವಾನಂದ ಪೂಜಾರಿ, ಕಲಾವತಿ ಮುಜಗೊಂಡ, ಬಾಳಾಸಾಹೇಬ ಹೊಳೆಮನಿ, ಮಹೇಶ ಅಂಜುಟಗಿ, ಸಂಜು ಬಗಲಿ, ನವಿನಗೌಡ, ಮಹಾನಂದ ಸರಸಂಬಾ, ಜಗದೇಶ ಕಲಶೇಟ್ಟಿ, ವಿಠ್ಠಲ ಮಿರಗಿ, ರಹಿಂ ಸಿಪಾಯಿ, ಸಿದ್ದು ಮ್ಯಾಳೇಶಿ, ಸದಾಶಿವ ಹೊಸಮನಿ, ಭಿಮಣ್ಣ ಬದನಿಕಾಯಿ ಮತ್ತಿತರರು ಇದ್ದರು.