ಬೆಂಗಳೂರು –
ಪಿಂಚಣಿ ಸೌಲಭ್ಯವು ಸೇರಿದಂತೆ ವಿವಿಧ ಬೇಡಿಕೆ ಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅನುದಾ ನಿತ ಶಾಲಾ, ಕಾಲೇಜುಗಳ ಬೋಧಕ, ಬೋಧಕೇ ತರ ಸಿಬ್ಬಂದಿ ನಗರದ ಸಿದ್ಧಗಂಗಾ ಮಠದಿಂದ ಬೆಂಗಳೂರಿಗೆ ಪಾದಯಾತ್ರೆಯಲ್ಲಿ ಆರಂಭಿಸಿ ದರು.ರಾಜ್ಯ ಅನುದಾನಿತ ಶಾಲೆ,ಕಾಲೇಜುಗಳ ನೌಕರರ ಸಂಘದ ನೇತೃತ್ವದಲ್ಲಿ ಈ ಹೋರಾಟ ಹಮ್ಮಿಕೊಂಡಿದ್ದು ಮಠದ ಆವರಣದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ನೌಕರರು ಘೋಷಣೆ ಕೂಗುತ್ತಾ ಪಾದಯಾತ್ರೆಗೆ ಚಾಲನೆ ನೀಡಿದರು.
2006ರ ಏಪ್ರಿಲ್ ನಂತರ ನೇಮಕಗೊಂಡ ನೌಕರರ ಎನ್‌ಪಿಎಸ್ ಯೋಜನೆಗೆ ಆಡಳಿತ ಮಂಡಳಿಯ ವಂತಿಗೆಯನ್ನು ಸರ್ಕಾರವೇ ಭರಿಸಬೇಕು ಮತ್ತು ಕಾಲ್ಪನಿಕ ವೇತನ ಜಾರಿ ಗೊಳಿಸಬೇಕು.2006ರ ಏಪ್ರಿಲ್‌ಗೂ ಮುನ್ನ ನೇಮಕವಾಗಿ ನಂತರ ಅನುದಾನಕ್ಕೆ ಒಳಪಟ್ಟ ನೌಕರರ ಹಿಂದಿನ ಸೇವೆಯನ್ನೂ ಪರಿಗಣಿಸಿ ಹಳೆ ಪಿಂಚಣಿ ಸೌಲಭ್ಯ ಜಾರಿಗೊಳಿಸಬೇಕು ಎಂಬುದು ಪ್ರಮುಖ ಬೇಡಿಕೆಗಳು.
ಜ್ಯೋತಿ ಸಂಜೀವಿನಿ ಹಾಗೂ ಇತರ ವೈದ್ಯಕೀಯ ಸೌಲಭ್ಯಗಳನ್ನು ತಾರತಮ್ಯ ಇಲ್ಲದೆ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೂ ನೀಡಬೇಕು ಎಂಬ ಬೇಡಿಕೆಯೂ ಸೇರಿದೆ’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಿ.ಹನುಮಂತಪ್ಪ ತಿಳಿಸಿದರು. ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದ ಕಾರಣ ಅ.10 ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ ವನದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲು ನಿರ್ಧರಿಸಿದ್ದೇವೆ ಎಂದರು
ಬೇಡಿಕೆ ಈಡೇರಿಸುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಆರ್.ಹನು ಮೇಶ್, ಉಪಾಧ್ಯಕ್ಷ ಪಿ.ಡಿ.ರವಿ, ಪ್ರಚಾರ ಸಮಿತಿ ಅಧ್ಯಕ್ಷ ವೆಂಕಟಾಚಲ,ಕಾರ್ಯಾಧ್ಯಕ್ಷ ಸಿ.ಎಂ. ಶಶಿಧರ, ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಅಧ್ಯಕ್ಷ ಜೆ.ಧರ್ಮೇಂದ್ರ ಪ್ರಸಾದ್, ಪದಾಧಿಕಾರಿಗಳಾದ ನರೇಶ್, ಗಜೇಂದ್ರ ಇದ್ದರು.