ಸರ್ಕಾರಿ ಶಾಲಾ ಮಕ್ಕಳಿಗೆ ಆಸರೆಯಾದ ದೇವಸ್ಥಾನ ಸೋರುತ್ತಿದೆ ಶಾಲೆ ದೇವಾಲಯ ದಲ್ಲಿ ಮಕ್ಕಳಿಗೆ ಪಾಠ…..

Suddi Sante Desk

ರಾಮನಗರ –

ಮಳೆ ಮುನ್ಸೂಚನೆ ಕಂಡರೆ ಸಾಕು ಈ ಶಾಲೆಯ ಮಕ್ಕಳು ಪಕ್ಕದ ದೇಗುಲಕ್ಕೆ ಓಡಬೇಕು.ಏಕೆಂದರೆ,ಕಟ್ಟಡ ಶಿಥಿಲವಾ ಗಿರುವುದು.ಅದು ಯಾವ ಮಟ್ಟಿಗೆ ಅಂದ್ರೆ ಮಳೆ ಬಂದ್ರೆ ಚಾವಣಿಯಿಂದಲೇ ನೀರು ಶಾಲಾ ಕೊಠಡಿಯೊಳಗೆ ನುಗ್ಗು ತ್ತದೆ.ಇದರಿಂದ ಆತಂಕಗೊಂಡ ಶಿಕ್ಷಕರು ಮಳೆ ಬಂದಾಗ ದೇವಾಲಯದ ಆವರಣದಲ್ಲಿ ಮಕ್ಕಳನ್ನು ಕೂರಿಸಿ ಪಾಠ ಮಾಡುತ್ತಾರೆ.ನಗರದ 31ನೇ ವಾರ್ಡ್‌ ಅರ್ಚಕರಹಳ್ಳಿಯ ಲ್ಲಿನ ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕು ಕಟ್ಟಡಗಳಿದ್ದು ಎರಡನ್ನು 30 ವರ್ಷ ಹಿಂದೆ ನಿರ್ಮಿಸಲಾ ಗಿದೆ.ಕಳಪೆ ಕಾಮಗಾರಿಯಾಗಿರುವ ಕಾರಣ,ಬೇಗನೇ ಶಿಥಿಲಗೊಂಡಿವೆ.ಉಳಿದ ಎರಡು ಕೊಠಡಿ 40 ವರ್ಷ ಹಳೆಯದ್ದಾಗಿವೆ.ಇಲ್ಲಿ ನಾಲ್ವರು ಶಿಕ್ಷಕರು ಕರ್ತವ್ಯ ನಿರ್ವ ಹಿಸುತ್ತಿದ್ದಾರೆ. ಮುಖ್ಯೋಪಾಧ್ಯಾಯರು ಸೇರಿ ಮೂವರು ಸರ್ಕಾರಿ ಶಿಕ್ಷಕರು ಒಬ್ಬ ಅತಿಥಿ ಶಿಕ್ಷಕ ಇದ್ದಾರೆ.1ರಿಂದ 7ನೇ ತರಗತಿವರೆಗೆ ಒಟ್ಟು 90 ವಿದ್ಯಾರ್ಥಿಗಳಿದ್ದು ಮೂರು ಕೊಠಡಿಗಳ ಚಾವಣಿ ಶಿಥಿಲಗೊಂಡಿದೆ.ಅಲ್ಲದೆ,ಕಟ್ಟಡದ ಮೋಲ್ಡ್‌ಗೆ ಬಳಸಲಾಗಿದ್ದ ಕಬ್ಬಿಣದ ಸರಳು ತುಕ್ಕು ಹಿಡಿದು ಹೊರಗೆ ಕಾಣಿಸುತ್ತವೆ.ಇದರಿಂದ ಮಕ್ಕಳು,ಶಿಕ್ಷಕರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಶಾಲಾ ಕೊಠಡಿ ಸ್ಥಿತಿ ನೋಡಿ ಕೆಲವು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರಿ ಶಾಲೆಗಳ ಉಳಿವಿಗಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಸರ್ಕಾರ ಸೌಲಭ್ಯ ನೀಡುವಲ್ಲಿ ಮಾತ್ರ ಸ್ವಲ್ಪ ಹಿಂದೆ ಬಿದ್ದಿದೆ ಎಂದರೆ ತಪ್ಪಲ್ಲ.ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸುವ ಸಲುವಾಗಿ ಕೆಲವು ಶಿಕ್ಷಕರು ಇನ್ನಿಲ್ಲದ ಕಸರತ್ತು ನಡೆಸುತ್ತಾರೆ.ಇಲಾಖೆಯ ಅಧಿಕಾರಿಗ ಳು ಕೂಡ ಹಲವು ಯೋಜನೆಗಳ ಅನುಷ್ಠಾನಕ್ಕೆ ಮುಂದಾ ಗಿದ್ದಾರೆ.

ಖಾಸಗಿ ವಲಯಗಳಿಂದ ಸಹಕಾರ ಪಡೆದು ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಲಾಗುತ್ತಿದೆ.ಇದರ ಜೊತೆಗೆ ಸರ್ಕಾರ ಹೆಚ್ಚು ಅನುದಾನ ಬಿಡುಗಡೆ ಮಾಡಿ ಸೌಲಭ್ಯ ಕಲ್ಪಿಸಬೇಕಿದೆ.ಸರ್ಕಾರ ಶಾಲೆಗಳ ಕೊಠಡಿ ನವೀಕರಣ ಮತ್ತು ನೂತನ ಕೊಠಡಿಗಳ ನಿರ್ಮಾಣಕ್ಕೆ ಆದ್ಯತೆ ನೀಡುವ ಮೂಲಕ ಮಕ್ಕಳ ಸುರಕ್ಷತೆ ಜೊತೆಗೆ ಉತ್ತಮ ಶಿಕ್ಷಣ ಕಲಿಕೆಯ ವಾತಾವರಣ ಸೃಷ್ಟಿಸಿದರೆ ಸರ್ಕಾರಿ ಶಾಲೆಗಳು ಉಳಿಯಲಿವೆ.ಈಗಾಗಲೇ ಶಾಲೆಗೆ ಮೂರು ಕೊಠಡಿವುಳ್ಳ ಹೊಸ ಕಟ್ಟಡ,ಎರಡು ಕೊಠಡಿಗಳ ದುರಸ್ತಿಗೆ ಕ್ರಮ ಕೈಗೊ ಳ್ಳಲಾಗಿದ್ದು ನಗರೋತ್ಥಾನ ಯೋಜನೆಯಡಿ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯಾವುದೇ ಸರ್ಕಾರಿ ಶಾಲೆ ನಗರ ಪ್ರದೇಶದಲ್ಲಿದ್ದರೆ ನಗರೋತ್ಥಾನ ಯೋಜನೆಯಡಿ ಹಣ ಮೀಸಲಿಟ್ಟು ದುರಸ್ತಿ ಮಾಡುವುದು ನೂತನ ಕಟ್ಟಡ ನಿರ್ಮಾಣಕಾರ್ಯ ಸುಗ ಮವಾಗಿ ಆಗುತ್ತಿದೆ.ಅಲ್ಲದೆ,ಸರ್ಕಾರ ವಿವಿಧ ಯೋಜ ನೆಗಳಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ 5 ಕೋಟಿ ರೂ. ಮತ್ತು ದುರಸ್ತಿ ಕಾರ್ಯಕ್ಕೆ 2 ಕೋಟಿ ರೂ. ಬಿಡುಗಡೆಮಾ ಡುತ್ತದೆ.ಈ ಶಾಲೆಗೂ ತಾಂತ್ರಿಕತೊಂದರೆ ಇತ್ತು.ಇದೀಗ ಪರಿಹಾರ ಆಗಿದೆ.ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭ ವಾಗುವ ನಂಬಿಕೆಯಿದೆ ಎಂದು ಹೇಳುತ್ತಾರೆ ಇಲಾಖೆಯ ಅಧಿಕಾರಿಗಳು

ಶಾಲಾ ಕಟ್ಟಡದ ಚಾವಣಿ ಬಿರುಕು ಬಿಟ್ಟಿದ್ದು ಸಿಮೆಂಟ್‌ ಪದರ ಆಗ್ಗಾಗ್ಗೆ ಉದುರುತ್ತದೆ.ಇದರಿಂದಾಗಿ ಪಾಠ ಮಾಡುವ ವೇಳೆ ಭಯ ಸಹಜವಾಗಿಯೇ ಇರುತ್ತೆ. ವಿಶೇಷ ವಾಗಿ ಮಳೆಗಾಲ ಬಂದ್ರೆ ನಮಗೆ ಆತಂಕ ಜಾಸ್ತಿ.ಆದ್ದರಿಂದ ಮುಂಜಾಗ್ರತಾ ಹಾಗೂ ಮಕ್ಕಳ ಹಿತದೃಷ್ಟಿಯಿಂದ ದೇವಾಲಯದಲ್ಲಿ ಪಾಠ ಮಾಡ್ತೇವೆ ಅಷ್ಟೇ.ಶಾಲಾ ಜಾಗದ ತಾಂತ್ರಿಕ ಸಮಸ್ಯೆ ಜಿಲ್ಲಾಧಿಕಾರಿಗಳ ಹಂತದಲ್ಲಿ ಪರಿಹಾರ ವಾಗಿದೆ.ಈಗಾಗಲೇ ದುರಸ್ತಿ ಮಾಡುವ ಸಲುವಾಗಿ ಇಲಾಖೆ ಕೂಡ ಕ್ರಮವಹಿಸಿದೆ.ಆದಷ್ಟು ಬೇಗ ಕಟ್ಟಡ ನಿರ್ಮಾಣವಾ ಗಲಿದೆ ಎಂಬ ವಿಶ್ವಾಸವಿದೆ ಎಂದು ಹೇಳುತ್ತಿದ್ದಾರೆ ಶಾಲೆಯ ಮುಖ್ಯೋಪಾಧ್ಯಾಯರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.