ಸರ್ಕಾರಿ ಶಾಲೆಯ ಬಿಸಿಯೂಟದ ಆಹಾರ ಧಾನ್ಯ ಕಳ್ಳತನ – ಶಾಲೆಯ ನಾಲ್ಕು ಕೋಣೆಯ ಬೀಗ ಮುರಿದು ಕನ್ನ…..ಪಕ್ಕದ ಅಂಗನವಾಡಿ ಕೇಂದ್ರದಲ್ಲೂ ಕಳ್ಳತನ

Suddi Sante Desk

ವಿಜಯಪುರ –

ಸರ್ಕಾರಿ ಶಾಲೆಯ ಆಹಾರ ಧಾನ್ಯಗಳನ್ನು ಕಳ್ಳತನ ಮಾಡಿದ ಘಟನೆ ವಿಜಯಪುರ ದಲ್ಲಿ ನಡೆದಿದೆ.ಜಿಲ್ಲೆಯ ತಿಕೋಟಾ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಟ್ಟಲಗಿ ಕ್ರಾಸ್ ಕನಮಡಿ ಶಾಲೆಯಲ್ಲಿ ಈ ಒಂದು ಕಳ್ಳತನ ನಡೆದಿದ್ದು ಕಿಡಿಗೇಡಿಗಳಿಂದ ಶಾಲೆಯಲ್ಲಿನ ಆಹಾರ ಧಾನ್ಯಗಳು ಕಳ್ಳತನವಾಗಿವೆ

ಬುಧವಾರ ರಾತ್ರಿ ಕಿಡಿಗೇಡಗಿಳಿಂದ ಶಾಲೆಯ ನಾಲ್ಕು ಕೋಣೆಯ ಕೀಲಿ ಒಡೆದು ಕಳ್ಳತನ ಮಾಡಿದ್ದಾರೆ ಖದೀಮ ಕಿಡಿಗೇಡಿಗಳು.ಶಾಲೆಯಲ್ಲಿನ 2 ಸಿಲಿಂಡರ್ 60 ಕೆ.ಜಿ ಗೋಧಿ,55 ಅಡುಗೆ ಎಣ್ಣೆ ಪಾಕೇಟ್,13 ಹಾಲಿನ ಪಾಕೀಟ್ 25 ಪ್ಲೇಟ್,10 ಚರಗಿ ಕಳ್ಳತನ ಮಾಡಿ ನಂತರ ಶಾಲೆಯ ಲ್ಲಿನ ಸಾಮಾನುಗಳನ್ನು ಚಿಲ್ಲಾಪಿಲ್ಲಿ ಮಾಡಿ ಹೋಗಿದ್ದಾರೆ ಕಳ್ಳರು

ಈ ಶಾಲೆಗೆ ಕನ್ನ ಹಾಕಿದ ನಂತರ ಇದಕ್ಕೆ ಹೊಂದಿಕೊಂಡಿ ರುವ ಅಂಗನವಾಡಿ ಕೇಂದ್ರಕ್ಕೂ ಸಹ ಕನ್ನ ಹಾಕಿದ್ದಾರೆ ಕಳ್ಳರು.ಅಂಗನವಾಡಿ ಶಾಲೆಯಲ್ಲಿನ ₹ 30 ಸಾವಿರ ಮೌಲ್ಯದ ಸೋಲಾರ ಬ್ಯಾಟರಿ ಕಳ್ಳತನ ಮಾಡಿದ್ದು ತಿಕೋಟಾ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆಯಾ ಗಿದ್ದು ಸುದ್ದಿ ತಿಳಿದ ತಿಕೋಟಾ ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಶೀಲನೆ ನಡೆಸಿದ್ದಾರೆ.ಘಟನೆ ಕುರಿತು ಶಿಕ್ಷಣ ಇಲಾಖೆ ಹಾಗೂ ಅಕ್ಷರ ದಾಸೋಹ ಅಧಿಕಾರಿಗಳಿಗೆ ಮಾಹಿತಿ ತಿಳಿಸಲಾಗಿದೆ ಎಂದು ಮುಖ್ಯ ಶಿಕ್ಷಕ ಬಿ.ಕೆ. ನಾಟೀಕಾರ ಅವರು ತಿಳಿಸಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.