ಚಿತ್ರದುರ್ಗ –
ಮನೆಯಲ್ಲಿ ಯಾರು ಇಲ್ಲದ ವೇಳೆ ಪೊಲೀಸ್ ಇನ್ಸ್ಪೆಕ್ಟರ್ ಮನೆ ದೋಚಿದ ಘಟನೆ ಚಿತ್ರದುರ್ಗ ದಲ್ಲಿ ನಡೆದಿದೆ.ಚಿತ್ರದುರ್ಗದ ಬಸವೇಶ್ವರ ಬಡಾವಣೆಯಲ್ಲಿ ಈ ಒಂದು ಘಟನೆ ನಡೆದಿದೆ.

ಚಿತ್ರದುರ್ಗದ SP ಕಚೇರಿಯ ಜಿಲ್ಲಾ ವಿಶೇಷ ಘಟಕದ CPI ಮೃತ್ಯುಂಜಯ ನಿವಾಸದಲ್ಲಿ ಕಳವಾಗಿದೆ.ಒಂದು ಪಿಸ್ತೂಲ್, ಒಂದು ಕಾರು, 60 ಸಾವಿರ ನಗದು ಹಣ, ಅಪಾರ ಚಿನ್ನಾಭರಣ ಕಳವು ಮಾಡಿಕೊಂಡು ಕಳ್ಳರು ಎಸ್ಕೇಪ್ ಆಗಿದ್ದಾರೆ

ಒಟ್ಟು 22 ಲಕ್ಷದ 73 ಸಾವಿರ ಮೌಲ್ಯದ ವಸ್ತುಗಳನ್ನು ಗ್ಯಾಂಗ್ ಕದ್ದುಕೊಂಡು ಪರಾರಿಯಾಗಿ ದ್ದಾರೆ.ಮೊನ್ನೆ ತಡರಾತ್ರಿ ಮನೆಯಲ್ಲಿ ಯಾರು ಇಲ್ಲದ ವೇಳೆ ಈ ಒಂದು ಘಟನೆ ನಡೆದಿದೆ.

ಮೃತ್ಯುಂಜಯ ಕುಟುಂಬ ಗೋಕರ್ಣಕ್ಕೆ ತೆರಳಿದ್ದ ವೇಳೆ ಈ ಒಂದು ಕಳ್ಳತನ ನಡೆದಿದೆ.ಘಟನೆಯ ಬಳಿಕ ನಗರದ ವೆಂಕಟರಮಣ ದೇವಸ್ಥಾನದ ಬಳಿ ಕಾರು, ಪಿಸ್ತೂಲ್ ಬಿಟ್ಟು ಪರಾರಿಯಾಗಿದ್ದಾರೆ ಕಳ್ಳರು.

ಇನ್ನೂ ಸುದ್ದಿ ತಿಳಿದು ಸ್ಥಳಕ್ಕೆ SP ಜಿ.ರಾಧಿಕಾ ಭೇಟಿ, ಪರಿಶೀಲನೆ ಮಾಡಿದರು.ಚಿತ್ರದುರ್ಗ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.