ಚಿಕ್ಕಬಳ್ಳಾಪುರ –
ಕೋವಿಡ್-19 ಸೋಂಕಿನಿಂದ ಸಾವಿಗೀಡಾದವರ ಪಾರ್ಥಿವ ಶರೀರ ಮನೆಯವರಿಗೇ ನೋಡಲು ಸಿಗದ ಪರಿಸ್ಥಿತಿ ಒಂದೆಡೆಯಾದರೆ ಸಿಕ್ಕರೂ ನೋಡ ಲು ಸಂಬಂಧಿಕರು-ಆಪ್ತರೂ ಬಂದು ನೋಡಲಾಗದ ಪರಿಸ್ಥಿತಿ ಮತ್ತೊಂದೆಡೆ ಇಂಥ ಸಂದರ್ಭದಲ್ಲಿ ಕಳ್ಳರು ಕೋವಿಡ್-19 ಸೋಂಕಿತರು ಎಂಬುದನ್ನು ಲೆಕ್ಕಿಸದೆ ಕರೊನಾದಿಂದಾಗಿ ಮೃತಪಟ್ಟವರ ಶವಗಳ ಮೇಲಿನ ಚಿನ್ನಾಭರಣಗಳನ್ನು ಕೂಡ ಕಳವು ಮಾಡಿಕೊಂಡು ಹೋಗುತ್ತಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಇಂಥ ಕಳ್ಳರ ಕಾಟ ಹೆಚ್ಚಾಗಿದ್ದು ಇಂದು ಕೂಡ ಮತ್ತೊಂದು ಇಂಥದ್ದೇ ಕಳವು ಪ್ರಕರಣ ವರದಿಯಾ ಗಿದೆ. ಕರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದ, ಚಿಕ್ಕಬಳ್ಳಾಪುರದ ನಿವಾಸಿ, ನಿವೃತ್ತ ಶಿಕ್ಷಕಿ ಜಯಮ್ಮ ಅವರ ಶವದ ಮೇಲಿದ್ದ ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದಾರೆ.

ಕೋವಿಡ್-19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜಯಮ್ಮ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು.ಆದರೆ ಚಿಕಿತ್ಸೆ ಫಲಿಸದೆ ಅವರು ನಿನ್ನೆ ರಾತ್ರಿ ಮೃತಪಟ್ಟಿದ್ದರು ಅವರ ದೇಹದ ಮೇಲಿದ್ದ ಚಿನ್ನಾಭರಣಗಳು ಕಾಣೆಯಾಗಿ ಗಿದ್ದು ಕೋವಿಡ್ ಆಸ್ಪತ್ರೆ ಉಸ್ತುವಾರಿಗಳಿಂದ ಬೇಜ ವಾಬ್ದಾರಿ ಉತ್ತರ ಕೇಳಿಬಂದಿದೆ ಎಂದು ಮೃತರ ಕಡೆಯವರು ಆರೋಪಿಸಿದ್ದು ಸಧ್ಯ ಈ ಒಂದು ವಿಚಾರ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ