ದೆಹಲಿ –
ಕರೋನಾ ಥರ್ಡ್‌ವೇವ್ ಮಕ್ಕಳ ಮೇಲೆ ಯಾವು ದೇ ಪರಿಣಾಮ ಬೀರುವುದಿಲ್ಲ ಎಂದು ಕೋವಿಡ್ ನಿರ್ವಹಣಾ ಸಮಿತಿಯ ಸದಸ್ಯ ಮತ್ತು ನೀತಿ ಅಯೋಗ್ ಸದಸ್ಯ ವಿ.ಕೆ.ಪಾಲ್ ಹೇಳಿದರು. ಯಾವುದೇ ಕೋವಿಡ್ ಅಲೆಯು ವಿಶೇಷವಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಅವರು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟ ಪಡಿಸಿದ್ದಾರೆ.
ಮೂರನೆಯ ಅಲೆಯಲ್ಲಿ ಚಿಕ್ಕ ಮಕ್ಕಳಿಗೆ ಕರೋನ ವ್ಯಾಪಿಸುತ್ತದೆ ಎಂದು ಅನೇಕ ಜನರು ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ಕರೋನಾ ಮೂರನೆಯ ಅಲೆಯು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ಯಾವುದೇ ನಿರ್ಣಾಯಕ ಪುರಾವೆ ಗಳಿಲ್ಲ ಎಂದರು.ಇನ್ನೂ ಹದಿಹರೆಯದವರಿಗೆ
ಸಿರೋಪ್ರಿವೆಲೆನ್ಸ್ ಹೇಗಿದೆಯೋ ಮಕ್ಕಳಿಗೂ ಕೂಡ ಇದೆ.ಆದರೆ ಮಕ್ಕಳಿಗೆ ಪ್ರತ್ಯೇಕವಾಗಿ ಕರೋನ ಮೂರನೇ ಅಲೆಯ ಪರಿಣಾಮ ಹೆಚ್ಚಾಗಿರುತ್ತದೆ ಎಂಬುದಕ್ಕೆ ಯಾವುದೇ ನಿರ್ಣಾಯಕ ಪುರಾವೆಗ ಳಿಲ್ಲ ಎಂದು ಅವರು ಹೇಳಿದರು
ಇಂಡಿಯನ್ ಪೀಡಿಯಾಟ್ರಿಕ್ ಅಸೋಸಿಯೇಷನ್ ಪ್ರಕಾರ ಪೋಷಕರ ಲಸಿಕೆ ಮಕ್ಕಳ ಮೇಲೆ ಇದೇ ರೀತಿಯ ಪರಿಣಾಮ ಬೀರುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.ಲಸಿಕೆ ವಿಷಯದಲ್ಲಿ ಪೋಷಕರು ಹಿಂಜರಿಯಬಾರದು. ಪೋಷಕರ ವ್ಯಾಕ್ಸಿನೇಷನ್ ಮಕ್ಕಳಲ್ಲಿ ವೈರಸ್ ಹರಡುವುದನ್ನು ಸ್ವಲ್ಪ ಮಟ್ಟಿಗೆ ತಡೆಯಲು ಸಹಾಯ ಮಾಡುತ್ತದೆ ಎಂದು ಹೇಳುತ್ತಾ ಕರೋನ ಸಂಕಷ್ಟದ ಭಯದಲ್ಲಿರುವವರಿಗೆ ಸಂತೋಷ ದ ಸುದ್ದಿಯನ್ನು ನೀಡಿದರು