ಈಜಲು ತೆರಳಿದ್ದ ಮೂವರು ಸಮುದ್ರ ಪಾಲು – ಮುಳುಗುತ್ತಿದ್ದ ಇನ್ನಿಬ್ಬರ ರಕ್ಷಣೆ

Suddi Sante Desk

ಕಾರವಾರ –

ಈಜಲು ತೆರಳಿದ್ದ ಮೂವರು ಪ್ರವಾಸಿಗರು ನೀರಿನಲ್ಲಿ ಮುಳುಗಿ ಸಾವಿಗೀಡಾದ ಘಟನೆ ಕಾರವಾರದ ಗೋಕರ್ಣ ದಲ್ಲಿ ನಡೆದಿದೆ‌.

ಗೋಕರ್ಣದ ಮುಖ್ಯ ಕಡಲತೀರದಲ್ಲಿ ಈ ಒಂದು ಘಟನೆ ನಡೆದಿದೆ.ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಗೋಕರ್ಣದಲ್ಲಿ ಈ ಒಂದು ಅವಘಡ ನಡೆದಿದೆ.

ಸುಮ(21), ತಿಪ್ಪೇಶ(20) ಹಾಗೂ ರವಿ(35) ಮೃತರರಾಗಿದ್ದಾರೆ‌.ಬೆಂಗಳೂರಿನ ಹೆಬ್ಬಗೋಡಿಯ ತಿರುಪಾಲ್ಯ ಮೂಲದವರಾಗಿದ್ದಾರೆ.16 ಜನರು ದೇವರ ದರ್ಶನಕ್ಕೆಂದು ಗೋಕರ್ಣಕ್ಕೆ ಆಗಮಿಸಿದ್ದರು

ದರ್ಶನದ ನಂತರ ಕಡಲತೀರದಲ್ಲಿ ಈಜಲು ತೆರಳಿದಾಗ ಈ ಒಂದು ಅವಘಡ ನಡೆದಿದೆ.ಇನ್ನೂ ಮುಳುಗುತ್ತಿದ್ದ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ ಪ್ರವಾಸಿ ಬೋಟ್ ಸಿಬ್ಬಂದಿಗಳು.

ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಪ್ರಕರಣ ನಡೆದಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.