ತೆಕ್ಕಲಕೋಟೆ –
ಸರ್ಕಾರಿ ಶಾಲೆಯ ಶೌಚಾಲಯ,ಅಡುಗೆ ಮನೆಗೆ ಬೀಗ – ನಿರ್ಮಾಣಗೊಂಡು ಅನಾಥವಾಗಿ ನಿಂತುಕೊಂಡ ಶೌಚಾಲಯ,ಅಡುಗೆ ಮನೆ…..
ಹೌದು ಇಂತಹದೊಂದು ಸಮಸ್ಯೆಯೊಂದು ಗೋಸಬಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಡು ಬರುತ್ತಿದೆ. ಹೊಸ ದಾಗಿ ಅಡುಗೆ ಕೋಣೆ ಮತ್ತು ಶೌಚಾಲಯ ನಿರ್ಮಾಣವಾಗಿ ತಿಂಗಳು ಕಳೆದರೂ ವಿದ್ಯಾರ್ಥಿ ಗಳ ಬಳಕೆಗೆ ಸಿಗದ ಕಾರಣ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.
ಹೀಗಾಗಿ ಶಾಲೆಯ ಆವರಣದಲ್ಲಿಯೇ ಬಿಸಿ ಯೂಟವನ್ನು ತಯಾರಿಸಲಾಗುತ್ತಿದ್ದು ವಿದ್ಯಾರ್ಥಿ ಗಳು ಬಯಲು ಶೌಚಲಯವನ್ನೇ ಅವಲಂಬಿಸಿ ದ್ದಾರೆ ಇನ್ನೂ ಭೈರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಶಾಲೆಯಲ್ಲಿ 1 ರಿಂದ 8ನೇ ತರಗತಿ ವರೆಗೆ 180 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು ಅಡುಗೆ ಕೋಣೆ ಮತ್ತು ಸುಸಜ್ಜಿತ ಶೌಚಾಲಯ ಒದಗಿಸುವ ಉದ್ದೇಶದಿಂದ ನರೇಗಾ ಯೋಜನೆಯಡಿ ₹7.45 ಲಕ್ಷ ವೆಚ್ಚದಲ್ಲಿ ಅಡುಗೆ ಕೋಣೆ ಮತ್ತು ₹3 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿದೆ.
ಕಾಮಗಾರಿ ಮುಗಿದು ಮೂರು ತಿಂಗಳು ಕಳೆದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇನ್ನೂ ಉದ್ಘಾಟನೆಯಾಗಿಲ್ಲ.ಮಳೆ,ಗಾಳಿ ಹಾಗೂ ದೂಳಿ ನಿಂದಾಗಿ ಶಾಲೆಯ ಆವರಣದಲ್ಲಿ ಬಿಸಿಯೂಟ ತಯಾರಿಸಲು ತೊಂದರೆಯಾಗುತ್ತಿದೆ.ಇದು ಮಕ್ಕಳ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ.ಅಡುಗೆ ಕೊಣೆಯನ್ನು ನೀಡಿದರೆ ನಮಗೆ ಅನುಕೂಲವಾಗುತ್ತದೆ ಎಂದು ಬಿಸಿಯೂಟ ತಯಾರಿಸುವ ಮಹಿಳೆಯರು ಮನವಿ ಮಾಡಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು ಕೂಡಲೇ ಸಮಸ್ಯೆ ಬಗೆ ಹರಿಸಬೇಕು ಶಾಲೆಯಲ್ಲಿ ಶೌಚಾಲಯ ಸೌಲಭ್ಯ ವಿಲ್ಲದೆ ನಾವು ಕೂಡ ಮನೆಗೆ ತೆರಳಿ ಶೌಚ ಕಾರ್ಯ ಮುಗಿಸಿಕೊಂಡು ಬರುತ್ತೇವೆ.
ವಿದ್ಯಾರ್ಥಿಗಳಿಗೆ ಬಯಲೇ ಶೌಚಾಲಯವಾಗಿದೆ ಎಂದು ಮುಖ್ಯಶಿಕ್ಷಕ ಪಂಚಣ್ಣ ಆಗ್ರಹಿಸಿದ್ದಾರೆ. ಇನ್ನೂ ಕಾಮಗಾರಿ ಮುಗಿಸಿದ ತಕ್ಷಣ ಶಿಕ್ಷಣ ಇಲಾಖೆಗೆ ಹಸ್ತಾಂತರಿಸುವಂತೆ ಪಿಡಿಒಗೆ ಸೂಚನೆ ನೀಡಲಾಗಿತ್ತು ಆದರೆ ಈ ವರೆಗೆ ಹಸ್ತಾಂತರ ಮಾಡಿಲ್ಲ ಹೀಗಾಗಿ ಬೀಗ ಹಾಕಿಕೊಂಡು ಎರಡು ಕೋಠಡಿಗಳು ಅನಾಥವಾಗಿ ನಿಂತುಕೊಂಡಿವೆ.
ಸುದ್ದಿ ಸಂತೆ ನ್ಯೂಸ್ ತೆಕ್ಕಲಕೋಟೆ…..