ಸೀಟ್ ಬೆಲ್ಟ್ ಹಾಕಿಲ್ಲವೆಂದು ಬೈಕ್ ಸವಾರನಿಗೆ ದಂಡ ಹಾಕಿದ ಸಂಚಾರಿ ಪೊಲೀಸರು ಕಂಗಾಲಾದ ಸ್ಕೂಟರ್ ಸವಾರ…..

Suddi Sante Desk

ಪುತ್ತೂರು –

ಸೀಟ್ ಬೆಲ್ಟ್ ಧರಿಸಿಲ್ಲ ಎಂದು ಸ್ಕೂಟರ್ ಸವಾರರೊಬ್ಬ ರಿಗೆ ಸಂಚಾರಿ ಪೊಲೀಸರು ದಂಡ ಹಾಕಿರುವ ಘಟನೆ ಪುತ್ತೂರಿ ನಲ್ಲಿ ನಡೆದಿದೆ.ಹೌದು ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರು ದಂಡ ವಸೂಲಿ ಮಾಡಿರುವ ವಿಚಿತ್ರ ಘಟನೆ ನಡೆದಿದೆ. ಈ ದಂಡದ ಬಗ್ಗೆ ವಿಚಾರಿಸಲು ಹೋಗಿದ್ದ ಪುತ್ತೂರು ನಗರಸಭೆಯ ಸದಸ್ಯ ಹಾಗೂ ಠಾಣೆಯ ಎಸ್ಸೈ ನಡುವೆ ಮಾತಿನ ಚಕಮಕಿ ನಡೆದು ಬಳಿಕ ನಗರ ಠಾಣೆಯ ಇನ್ಸ್ಪೆಕ್ಟರ್ ಆಗಮಿಸಿ ಪ್ರಕರಣವನ್ನು ಇತ್ಯರ್ಥಪಡಿಸಿದ್ದಾರೆ ಪುತ್ತೂರು ತಾಲೂಕಿನ ಕೊಡಿಪ್ಪಾಡಿ ನಿವಾಸಿ ಬೆಳಿಯಪ್ಪ ಗೌಡ ಎಂಬವರು ಮಾ.7 ರಂದು ತನ್ನ ಸ್ಕೂಟರ್‌ನಲ್ಲಿ ಪುತ್ತೂರು ನಗರದ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆಯಲ್ಲಿ ರಸ್ತೆ ಗಸ್ತು ನಿರತರಾಗಿದ್ದ ಪೊಲೀಸರೊಬ್ಬರು ಸ್ಕೂಟರ್ ನಿಲ್ಲಿಸುವಂತೆ ಸೂಚಿಸಿ ದಾಖಲೆ ಪತ್ರ ಪರಿಶೀಲನೆ ನಡೆಸಿ ಬಳಿಕ ರೂ. 500 ದಂಡ ವಸೂಲಿ ಮಾಡಿದ್ದರು.ಈ ಬಗ್ಗೆ ನೀಡಿದ್ದ ರಶೀದಿಯಲ್ಲಿ ಅಪರಾಧ ವಿಭಾಗದಲ್ಲಿ ವಿದ್ದೌಟ್ ಸೀಟ್ ಬೆಲ್ಟ್ ಎಂದು ಬರೆಯಲಾಗಿತ್ತು ಅಲ್ಲದೆ ರಶೀದಿಯಲ್ಲಿ 25-02-2021 ಎಂದು ಒಂದು ವರ್ಷ ಹಿಂದಿನ ದಿನಾಂಕ ನಮೂದಾಗಿರು ವುದನ್ನು ಬೆಳ್ಳಿಯಪ್ಪ ಗಮನಿಸಿದರು.

ಈ ಕುರಿತು ಎಸ್ಸೈ ಅವರಲ್ಲಿ ವಿಚಾರಿಸಿದಾಗ ಯಾವುದೇ ಸ್ಪಂದನ ಸಿಕ್ಕಿಲ್ಲವೆಂದು ಬೆಳಿಯಪ್ಪ ಗೌಡ ಅವರು ನಗರ ಸಭಾ ಸದಸ್ಯ ಶಿವರಾಮ ಸಫಲ್ಯ ಅವರಿಗೆ ವಿಚಾರ ತಿಳಿಸಿದ್ದಾರೆ.ಈ ಹಿನ್ನಲೆಯಲ್ಲಿ ಶಿವರಾಮ ಸಫಲ್ಯ ಅವರು ಮಹಿಳಾ ಠಾಣೆಗೆ ಆಗಮಿಸಿ ವಿಚಾರಿಸಿದಾಗ ಅಧಿಕಾರಿಗ ಳೊಂದಿಗೆ ಮಾತಿನ ಚಕಮಕಿಯೂ ನಡೆಯಿತು.

ಬಳಿಕ ಪುತ್ತೂರು ನಗರ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಸುನೀಲ್ ಆಗಮಿಸಿ ಮಾತುಕತೆ ನಡೆಸಿ ಪ್ರಕರಣವನ್ನು ಇತ್ಯರ್ಥಪಡಿಸಿ ಸುಖಾಂತ್ಯ ಹಾಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.