ಬೆಂಗಳೂರು –
ಕೊನೆಗೂ ಕಳೆದ ಹಲವು ದಿನಗಳಿಂದ ತುಂಬಾ ತುಂಬಾ ನಿರೀಕ್ಷೆಯಲ್ಲಿದ್ದ ಶಿಕ್ಷಕರ ವರ್ಗಾವಣೆಗೆ ಶಾಶ್ವತ ಮುಕ್ತಿ ಸಿಕ್ಕಿದೆ.ಹೌದು ಶಿಕ್ಷಕರ ವರ್ಗಾವಣೆ ಮಸೂದೆಗೆ ಅಧಿವೇಶನದಲ್ಲಿ ಅಂಗೀಕಾರ ಸಿಕ್ಕಿದೆ ಉತ್ತರ ಕರ್ನಾಟಕ ಭಾಗದ ಕೆಲ ಶಾಸಕರ ವಿರೋಧದ ನಡುವೆ ಅಂಗೀಕಾರ ನೀಡಲಾಯಿತು.
ವಿಧಾನ ಸೌಧ ದಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಮಸೂದೆಯ ಕುರಿತು ಮಾತನಾಡಿ ಯಾರು ಒತ್ತಾಯ ಪೂರ್ವಕವಾಗಿ ವರ್ಗಾವಣೆ ಯಾಗಿ ದ್ದರೋ ಅವರಿಗೆ ಒಂದು ಬಾರಿ ಅವಕಾಶ ಕಲ್ಪಿಸಲು ಈ ಮಸೂದೆ ಮೂಲಕ ಅವಕಾಶ ಕಲ್ಪಿಸಲಾಗಿದೆ ಎಂದರು
ಆದರೆ ಬೇರೆ ವಿಭಾಗದಿಂದ ಇನ್ನೊಂದು ವಿಭಾಗಕ್ಕೆ ವರ್ಗಾವಣೆಗೆ ಅವಕಾಶವಿಲ್ಲ ಎಂದರು.ಕಡ್ಡಾಯ ವರ್ಗಾವಣೆ ಹಿನ್ನೆಲೆಯಲ್ಲಿ ಅಂಗವಿಕಲರು, ಗರ್ಭಿಣಿ ಯರು,55 ವರ್ಷ ಮೀರಿದವರನ್ನು ವರ್ಗಾಯಿಸ ಲಾಗಿತ್ತು ಹೀಗಾಗಿ ಅವರು ತೊಂದರೆ ಅನುಭವಿಸು ತ್ತಿದ್ದಾರೆ. ಒಮ್ಮೆ ಮಾತ್ರ ಅವರು ಮರಳಿ ಹಿಂದಿನ ಶಾಲೆಗೆ ಹೋಗಲು ಅವಕಾಶ ಕಲ್ಪಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು. ಅನಂತರ ವರ್ಗಾಣೆ ಮಸೂದೆಗೆ ಅಂಗೀಕಾರ ನೀಡಲಾಯಿತು.
.