ಬೆಂಗಳೂರು –
ಯಾರಿಗೂ ಯಾವುದೇ ಇಲಾಖೆ ಗಳಿಲ್ಲದ ವರ್ಗಾ ವಣೆಯ ನೀತಿ ಶಿಕ್ಷಣ ಇಲಾಖೆ ಗೆ ಅದರಲ್ಲೂ ಶಿಕ್ಷಕರಿಗೆ ಇದೆ.ಅದೇನೊ ಕರ್ಮ ಪಾಪವನ್ನು ನಮ್ಮ ಶಿಕ್ಷಕರು ಮಾಡಿದ್ದಾರೊ ಗೊತ್ತಿಲ್ಲ ಏನೇಲ್ಲಾ ಕಷ್ಟ ಪಟ್ಟು ಓದಿ ಕಷ್ಟ ಪಟ್ಟು ಕೆಲಸಕ್ಕೆ ಸೇರಿ ಸಮಾಜ ವನ್ನು ರೂಪಿಸಿ ನಾಲ್ಕು ಅಕ್ಷರ ಗಳನ್ನು ಬಿತ್ತನೆ ಮಾಡುವ ಈ ಶಿಕ್ಷಕರ ನೋವು ನರಕಯಾತನೆ ಅನುಭವಿಸುತ್ತಿರುವ ಶಿಕ್ಷಕರಿಗೆ ಗೊತ್ತು.

ದುರಂತವೆಂದರೆ ಕರ್ತವ್ಯಕ್ಕೆ ಸೇರಿಕೊಂಡು ಆರಂಭ ದಿಂದಲೂ ಈವರೆಗೆ ಒಂದೇ ಸ್ಥಳದಲ್ಲಿಯೇ ಡೂಟಿ ಯನ್ನು ಮಾಡುತ್ತಿದ್ದಾರೆ.ಒಂದು ಕಡೆಗೆ ಹೆಂಡತಿ ಮತ್ತೊಂದು ಕಡೆಗೆ ತಾವು ಇನ್ನೊಂದು ಕಡೆಗೆ ಪೋಷಕರು ಮತ್ತೊಂದು ಕಡೆಗೆ ಮಕ್ಕಳು ಹೀಗೆ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ದಿಕ್ಕಾಪಾಲಾಗಿ ಕರ್ತವ್ಯ ವನ್ನು ಇವರು ಮಾಡುತ್ತಿದ್ದಾರೆ.ಹೀಗಾಗಿ ಇವರ ಧ್ವನಿಯಾಗಿರುವ ಶಿಕ್ಷಕರ ಸಂಘಟನೆಯ ನಾಯಕ ರು ಮಾತ್ರ ಮೌನವಾಗಿದ್ದಾರೆ. ಶಿಕ್ಷಕರ ಪರಸ್ಥಿತಿ ಇವರಿಗೆ ಅರ್ಥವಾಗುತ್ತಿಲ್ಲ ಎಷ್ಟೇ ಹೇಳಿದರು ಕೇಳಿದರೂ ಸುಮ್ಮನಿದ್ದಾರೆ.ಜೀವನದಲ್ಲಿ ಎಲ್ಲರ ಹಾಗೇ ನಮಗೂ ಕೂಡಾ ಒಮ್ಮೆಯಾದರೂ ಕೇಳಿದ್ದ ಲ್ಲಿ ವರ್ಗಾವಣೆಯನ್ನು ಕೊಡಿ ಎಂದು ಶಿಕ್ಷಕರು ಬೇಡಿಕೆ ಇಟ್ಟು ಕೇಳುತ್ತಿದ್ದರೂ ಕೂಡಾ ಯಾರು ಕೇಳುತ್ತಿಲ್ಲ ಸ್ಪಂದಿಸುತ್ತಿಲ್ಲ ಹೀಗಾಗಿ ಒಳಗೊಳಗೆ ಶಿಕ್ಷಕರು ಈ ಒಂದು ಅವೈಜ್ಞಾನಿಕವಾದ ವರ್ಗಾವಣೆ ಯ ನೀತಿಯ ವಿರುದ್ದ ಸಿಡಿದ್ದೆದ್ದಿದ್ದು ಬೆಂಗಳೂರು ಚಲೊ ಗೆ ಯೋಚನೆ ಮಾಡ್ತಾ ಇದ್ದಾರೆ.ಇನ್ನೂ ಪ್ರಮುಖವಾಗಿ ವರ್ಗಾವಣೆಯ ನೀತಿ ವರ್ಷದಿಂದ ವರ್ಷಕ್ಕೆ ಕಠಿಣವಾಗುತ್ತಿದೆ ಸರಳವಾಗುತ್ತಿಲ್ಲ ಕಗ್ಗಂಟಾಗುತ್ತಿರುವ ಈ ಒಂದು ವರ್ಗಾವಣೆಯ ನೀತಿ ಯಾವಾಗ ಸರಿಯಾಗುತ್ತದೆ ಸರಳದ ಮಾತು ಇರಲಿ ಗೊಂದಲವಾಗುತ್ತಿದ್ದು ಇದರಿಂದಾಗಿ ನಾಡಿನ ಶಿಕ್ಷಕರು ವರ್ಷಕ್ಕೊಮ್ಮೆ ಸದಸ್ಯತ್ವ ಹಣವನ್ನು ತಗೆದುಕೊಂಡು ಸುಮ್ಮನೆ ಕುಳಿತಿರುವವರ ವಿರುದ್ದ ಹಾಗೇ ಶಿಕ್ಷಕರ ಧ್ವನಿಯಾಗಿ ಮೌನವಾಗಿರುವ ಶಿಕ್ಷಕರ ಸಂಘಟನೆಯ ನಾಯಕರ ವಿರುದ್ದ ಅಸಮಾಧಾನಗೊಂಡಿದ್ದು ಅನಿವಾರ್ಯವಾಗಿ ತಾವೇ ಸಂಘಟನೆಯನ್ನು ಕಟ್ಟಿಕೊಂಡು ಹೋರಾ ಟಕ್ಕೆ ಪ್ಲಾನ್ ಮಾಡುತ್ತಿದ್ದಾರೆ. ಶಿಕ್ಷಕರು ಬೀದಿಗಿಳಿ ಯುವ ಮುನ್ನವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಲೇ ವರ್ಗಾವಣೆಯ ಕುರಿತಂತೆ ಸಭೆ ಮಾಡಿ ಸ್ಬಂದಿಸೊದು ಅವಶ್ಯಕವಿದೆ ಇದಾಗುತ್ತದೆನಾ ಕಾದು ನೊಡಬೇಕು.