ಪ್ರಧಾನಿ ನರೇಂದ್ರ ಮೋದಿ ಆಗಮನಕ್ಕೆ ಮಧುವಣಗಿತ್ತಿಯಂತೆ ಸಿದ್ದವಾಗುತ್ತಿದೆ ಅವಳಿ ನಗರ – ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತ್ರತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಸಜ್ಜಾಗುತ್ತಿದೆ ಹುಬ್ಬಳ್ಳಿ ಧಾರವಾಡ

Suddi Sante Desk
ಪ್ರಧಾನಿ ನರೇಂದ್ರ ಮೋದಿ ಆಗಮನಕ್ಕೆ ಮಧುವಣಗಿತ್ತಿಯಂತೆ ಸಿದ್ದವಾಗುತ್ತಿದೆ ಅವಳಿ ನಗರ –  ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತ್ರತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಸಜ್ಜಾಗುತ್ತಿದೆ ಹುಬ್ಬಳ್ಳಿ ಧಾರವಾಡ

ಹುಬ್ಬಳ್ಳಿ ಧಾರವಾಡ –

ರಾಷ್ಟ್ರೀಯ ಯುವ ಜನೋತ್ಸವ 2023 ರ ಐತಿಹಾಸಿಕ ಕಾರ್ಯಕ್ರಮಕ್ಕೆ ಹುಬ್ಬಳ್ಳಿ ಧಾರವಾಡ ಸಿದ್ದವಾಗುತ್ತಿದೆ.ಈಗಾಗಲೇ ಅವಳಿ ನಗರ ವಿವಿಧ ಕಾರ್ಯಕ್ರಮಗಳಿಗಾಗಿ ಸಂಪೂರ್ಣವಾಗಿ ಸಿದ್ದ ವಾಗಿದ್ದು ದೇಶದ ಸಾವಿರಾರೂ ಕಲಾವಿದರ ಕಲಾ ಪ್ರತಿಭೆಗೆ ವೇದಿಕೆಗಳು ಸಿದ್ದವಾಗಿದ್ದು ದೇಶದ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮವನ್ನು ಜನೆವರಿ 12 ರಂದು ಉದ್ಘಾಟನೆ ಮಾಡಲಿದ್ದಾರೆ

ಇದರೊಂದಿಗೆ ಆರು ದಿನಗಳ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದ್ದು ಸಾಂಸ್ಕ್ರತಿಕ ಉತ್ಸವದ ಕಲರವ ಅನಾವರಣಗೊಳ್ಳಲಿದ್ದು ದೇಶದ ಮೂಲೆ ಮೂಲೆ ಗಳಿಂದ ಹೆಸರಾಂತ ಕಲಾವಿದರು ಪಾಲ್ಲೊಳ್ಳಲಿ ರುವ ಈ ಒಂದು ಕಾರ್ಯಕ್ರಮವು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನೇತ್ರತ್ವದಲ್ಲಿ ನಡೆಯು ತ್ತಿದ್ದು ಇದಕ್ಕಾಗಿ ಹುಬ್ಬಳ್ಳಿ ಧಾರವಾಡ ಸಂಪೂರ್ಣ ವಾಗಿ ಸಿದ್ದವಾಗುತ್ತಿದೆ.

 

 

ಅವಳಿ ನಗರದಲ್ಲಿ ಈಗಲೇ ಸಾಂಸ್ಕೃತಿಕ ಉತ್ಸವದ ಕಲರವ ಎಲ್ಲಿ ನೋಡಿದಲ್ಲಿ ಕಂಡು ಬರುತ್ತಿದ್ದು ಯುವಕರಿಗೆ ಸ್ಪೂರ್ತಿದಾಯಕ ವ್ಯಕ್ತಿತ್ವ,ರಾಷ್ಟ್ರ ಕಂಡ ಶ್ರೇಷ್ಠ ಸನ್ಯಾಸಿ ಸ್ವಾಮಿ ವಿವೇಕಾನಂದರ ಜನ್ಮ ಜಯಂತಿಯ ಪ್ರಯುಕ್ತ ಇದೇ ಜನವರಿ 12 ರಿಂದ 16ರವರೆಗೆ ಹುಬ್ಬಳ್ಳಿ ಧಾರವಾಡದಲ್ಲಿ ರಾಷ್ಟ್ರೀಯ ಯುವಜನೋತ್ಸವ  ನಡೆಯಲಿದೆ

2023 ಕಾರ್ಯಕ್ರಮದ ಉದ್ಘಾಟನೆಗೆ ಆಗಮಿ ಸುತ್ತಿರುವ ಪ್ರಧಾನಮಂತ್ರಿ ಅವರನ್ನು ಸ್ವಾಗತಿ ಸಲು ಹುಬ್ಬಳ್ಳಿ ಧಾರವಾಡ ಮಧುವಣಗಿತ್ತಿಯಂತೆ ಸಜ್ಜಾಗಿದ್ದು ನಾವೆಲ್ಲರೂ ಹೃತ್ಪೂರ್ವಕವಾಗಿ ಅದ್ದೂರಿಯಿಂದ ಸ್ವಾಗತಿಸೋಣ.ನಮ್ಮ ನೆಲದ ಸಂಸ್ಕೃತಿ ಸಂಸ್ಕಾರ ಆಚಾರ ವಿಚಾರಗಳನ್ನು ಜಗತ್ತಿಗೆ ಪರಿಚಯಿಸೋಣ ಎಂಬ ಸಂದೇಶವನ್ನು ಹೇಳುತ್ತಾ ಅವಳಿ ನಗರದ ಜನತೆಯ ಪರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕರೆ ನೀಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.