ಬೆಂಗಳೂರು –
ಎಸಿಬಿ ಬಲೆಗೆ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತೆಯೊಬ್ಬರು ಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಹೌದು ಎಲೆಕ್ಟ್ರಿಕಲ್ ಮತ್ತು ಹಾರ್ಡ್‌ವೇರ್ ಉದ್ಯಮಿಯೊಬ್ಬರಿಗೆ ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ)ನೋಂದಣಿ ಪ್ರಮಾಣಪತ್ರ ನೀಡಲು ₹ 3,000 ಲಂಚ ಪಡೆಯುತ್ತಿದ್ದ ವಾಣಿಜ್ಯ ತೆರಿಗೆ ಇಲಾಖೆ ಇಂದಿರಾನ ಗರ ಕಚೇರಿಯ ಸಹಾಯಕ ಆಯುಕ್ತೆ ಪ್ರಿಯಾಂಕಾ ಜಿ.ಸಿ ಅವರೇ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಬಿದ್ದವರಾಗಿದ್ದು ಮಂಜುನಾಥನಗರದ ಕಲ್ಕೆರೆ ನಿವಾಸಿಯೊಬ್ಬರು ಜಿಎಸ್‌ಟಿ ಪ್ರಮಾಣಪತ್ರ ಕೋರಿ ಅರ್ಜಿ ಸಲ್ಲಿಸಿದ್ದರು.

ದಾಖಲೆಯಲ್ಲಿ ಅಂಚೆ ಪೆಟ್ಟಿಗೆ ಸಂಖ್ಯೆಯನ್ನು ಅರ್ಜಿಯಲ್ಲಿ ತಪ್ಪಾಗಿ ನಮೂದಿಸಿದ್ದರು.ಇದರಿಂದಾಗಿ ಪ್ರಮಾಣಪತ್ರ ವಿತರಿಸಿರಲಿಲ್ಲ. ಅರ್ಜಿಯಲ್ಲಿನ ತಪ್ಪು ಸರಿಪಡಿಸಿ ಪ್ರಮಾ ಣಪತ್ರ ನೀಡಲು ₹ 10,000 ಲಂಚ ನೀಡುವಂತೆ ಆರೋಪಿ ಬೇಡಿಕೆ ಇಟ್ಟಿದ್ದರು.ಅಂತಿಮವಾಗಿ ಚೌಕಾಸಿ ಮಾಡಿದಾಗ. ₹ 3,000 ನೀಡಿದರೆ ಪ್ರಮಾಣಪತ್ರ ಕೊಡುವುದಾಗಿ ತಿಳಿಸಿ ದ್ದರು.ಈ ಕುರಿತು ಅರ್ಜಿದಾರರು ಎಸಿಬಿ ಬೆಂಗಳೂರು ನಗರ ಘಟಕಕ್ಕೆ ದೂರು ಸಲ್ಲಿಸಿದ್ದರು.ಅರ್ಜಿದಾರರಿಂದ ಲಂಚ ಪಡೆಯುತ್ತಿದ್ದಾಗ ದಾಳಿಮಾಡಿದ ಎಸಿಬಿ ಅಧಿಕಾರಿ ಗಳು ಪ್ರಿಯಾಂಕಾ ಅವರನ್ನು ಬಂಧಿಸಿದ್ದಾರೆ.

ಇನ್ನೂ ಮಂಡ್ಯ ಜಿಲ್ಲೆಯ ಪರಿಸರ ಅಧಿಕಾರಿಯಾಗಿರುವ ಹೇಮಲತಾ ಅವರು ಕೂಡಾ ಲಂಚಕ್ಕೆ ಬೇಡಿಕೆ ಇಟ್ಟು ಬಲೆಗೆ ಬಿದ್ದಿದ್ದು ಸಧ್ಯ ಇಬ್ಬರು ಮಹಿಳಾ ಅಧಿಕಾರ ಗಳನ್ನು ವಶಕ್ಕೆ ತೆಗೆದುಕೊಂಡಿರುವ ಎಸಿಬಿ ಅಧಿಕಾರಿ ಗಳು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.