ಶಾಲೆಯಲ್ಲಿ ಕಣ್ಣೀರಾಕಿದ ಇಬ್ಬರು ಮಹಿಳಾ ಶಿಕ್ಷಕಿಯರು – ಶಾಲೆಗೆ DDPI ಪೊಲೀಸರು ಭೇಟಿ ಮಾಹಿತಿ ಪಡೆದುಕೊಂಡು ಟೀಮ್

Suddi Sante Desk

ಹಾವೇರಿ –

ಸಹಶಿಕ್ಷಕನಿಂದ ಲೈಂಗಿಕ ಕಿರುಕುಳ ನಡೆದಿದೆ ಎಂದು ಇಬ್ಬರು ಮಹಿಳಾ ಶಿಕ್ಷಕರಿಯರು ಆರೋಪ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಜಿಲ್ಲೆಯ ಹಾನಗಲ್ ತಾಲೂಕಿನ ಬಮ್ಮನಹಳ್ಳಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಈ ಪ್ರಕರಣ ನಡೆದಿದೆ.ಸಹಶಿಕ್ಷಕನ ಕೃತ್ಯದಿಂದ ಕಣ್ಣೀರು ಹಾಕಿದ ಇಬ್ಬರು ಶಿಕ್ಷಕಿಯರು ಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಸಿದ್ದಪ್ಪ ಜೋಗಿ ವಿರುದ್ಧ ಆರೋಪ ಮಾಡಿದ್ದಾರೆ. ಸಹಶಿಕ್ಷಕಿ ಯರು ಮತ್ತು ಮುಖ್ಯೋಪಾಧ್ಯಾಯಿನಿಗೆ ಲೈಂಗಿಕ ಕಿರು ಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ.ಶಿಕ್ಷಕನ ಕೃತ್ಯಕ್ಕೆ ಬೇಸತ್ತು ಸಹಶಿಕ್ಷಕಿ ಮತ್ತು ಮುಖ್ಯೋಪಾಧ್ಯಾಯಿನಿ ಕಣ್ಣೀರು ಹಾಕಿದ್ದಾರೆ.ಇನ್ನೂ ವಿಚಾರ ತಿಳಿದು ಶಾಲೆಗೆ ಡಿಡಿಪಿಐ ಜಗದೀಶ್ವರ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು

ಆದರೆ ಸಹ ಶಿಕ್ಷಕಿಯರು ಮತ್ತು ಮುಖ್ಯೋಪಾಧ್ಯಾಯಿನಿ ಯವರಿಂದ ಕೇಳಿಬಂದಿರುವ ಆರೋಪವನ್ನು ಸಹಶಿಕ್ಷಕ ಸಿದ್ದಪ್ಪ ಅಲ್ಲಗಳೆದಿದ್ದಾರೆ.ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.ಇನ್ನೂ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರ ಸಮ್ಮುಖದಲ್ಲಿ ವಿಚಾರಣೆ ಮಾಡಿ ಮಾಹಿತಿಯನ್ನು ಪಡೆದುಕೊಂಡಿದ್ದು ಮುಂದೇನು ಮಾಡತಾರೆ ಎಂಬೊಂದನ್ನು ಕಾದು ನೋಡಬೇಕು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.