ತುಮಕೂರು –
ಶಿಕ್ಷಣ ಸಚಿವರ ತವರೂರಿನಲ್ಲಿ ಇಬ್ಬರು ಶಿಕ್ಷಕಿಯರಿಬ್ಬರನ್ನು ಅಮಾನತು ಮಾಡಲಾಗಿದೆ.ಹೌದು ಮದ್ಯ ಸೇವಿಸಿ ಮಕ್ಕಳಿಗೆ ಪಾಠ ಮಾಡುತ್ತಿದ್ದ ಆರೋಪದಲ್ಲಿ ತಾಲೂಕಿನ ಗಳಿಗೇನಹಳ್ಳಿ ಕ್ಲಸ್ಟರ್ ವ್ಯಾಪ್ತಿಯ ಚಿಕ್ಕಸಾರಂಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಗಂಗ ಲಕ್ಷ್ಮಮ್ಮ ಅವರನ್ನು ಅಮಾನತು ಮಾಡಲಾಗಿದೆ.
ಜೊತೆಗೆ ಇದೇ ಶಾಲೆಯ ನಾಗರತ್ನಮ್ಮ ಅವರನ್ನೂ ಕೂಡಾ ಅಮಾನತು ಮಾಡಲಾಗಿದೆ.ಈ ಸಂಬಂಧ ಪೋಷಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹನು ಮಾನಾಯ್ಕ್ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಈ ವೇಳೆ ಶಿಕ್ಷಕಿ ಗಂಗಲಕ್ಷ್ಮಮ್ಮ ಅವರ ಟೇಬಲ್ ಒಳಗಡೆ ಮದ್ಯದ ಬಾಟಲಿ ಪತ್ತೆಯಾಗಿದೆ.
ಘಟನೆಯನ್ನು ಸೂಕ್ಷ್ಮವಾಗಿ ಅರಿತ ಶಿಕ್ಷಣ ಇಲಾಖೆ ಶಿಕ್ಷಕಿ ಗಂಗಲಕ್ಷ್ಮಮ್ಮಳನ್ನು ಇಲಾಖಾ ವಿಚಾರಣೆಗೆ ಒಳಪಡಿಸಿದೆ.