ಮಂಗಳೂರು –
ಶಿಕ್ಷಣ ಸಚಿವರು ಪತ್ರಿಕಾಗೋಷ್ಠಿ ಕರೆದು ಎಸ್ ಡಿಎಂಸಿ ಗಳು ಕಳಪೆ ಗುಣಮಟ್ಟದ ಸಮವಸ್ತ್ರ ನೀಡಿವೆ ಎಂಬ ಬೇಜವಾಬ್ದಾರಿ ಹೇಳಿಕೆಯನ್ನು ನೀಡಿದ್ದು ಇದನ್ನು ಖಂಡಿಸು ವುದಾಗಿ ಕರ್ನಾಟಕ ರಾಜ್ಯ ಎಸ್ ಡಿಎಂಸಿ ಸಮನ್ವಯ ವೇದಿಕೆ ತಿಳಿಸಿದೆ.ಕಳಪೆ ಗುಣಮಟ್ಟದ ಸಮವಸ್ತ್ರ ನೀಡಿ ರುವ ಎಸ್ ಡಿಎಂಸಿಗಳ ದತ್ತಾಂಶ ಇದ್ದರೆ ಬಿಡುಗಡೆ ಮಾಡಲಿ.ತಮ್ಮ ಹಂತದಲ್ಲಿ ಆಗಿರುವ ಭ್ರಷ್ಟಾಚಾರವನ್ನು ಮರೆಮಾಚಲು ಸಚಿವರು ಎಸ್ ಡಿಎಂಸಿ ಗಳ ಮೇಲೆ ಅನ್ಯತಾ ಸುಳ್ಳು ಆರೋಪ ಮಾಡುತ್ತಿದ್ದಾರೆ.ಸರಕಾರಿ ಶಾಲೆ ಗಳಲ್ಲಿ ಕೊಡುವಂತಹ 2ನೆ ಜೋಡಿ ಸಮವಸ್ತ್ರವೂ ಎಸ್ ಡಿಎಂಸಿ ಯವರ ಮೇಲ್ನೋಟದಲ್ಲಿ ಖರೀದಿ ಮಾಡುವ ಕಾರಣ ಕನಿಷ್ಠ ಒಂದು ವರ್ಷ ಮಕ್ಕಳು ಉಪಯೋಗಿಸಲು ಪ್ರಾಪ್ತರಾಗುತ್ತಿದ್ದು ಸರಕಾರದ ಮಟ್ಟದಲ್ಲಿ ಖರೀದಿ ಮಾಡುವ ಸಮವಸ್ತ್ರದ ಬಟ್ಟೆಯ ಕ್ವಾಲಿಟಿಯ ಬಗ್ಗೆ ಎಸ್ಡಿಎಂಸಿಗಳು ಮೊದಲಿನಿಂದಲೂ ದೂರುಗಳನ್ನು ನೀಡುತ್ತಾ ಬಂದಿದೆ.

ಈಗ ಸರಕಾರದ ಮಟ್ಟದಲ್ಲಿ ನಡೆದಂತಹ ಯೂನಿಫಾರ್ಮ್ ಹಗರಣದ ತನಿಖೆಯ ದಿಕ್ಕನ್ನು ತಿರುಗಿಸುವ ನಿಟ್ಟಿನಲ್ಲಿ ಸರಕಾರಿ ಶಾಲೆಗಳ ಉಳಿವಿಗೆ ಕಾರಣರಾದ ಪೋಷಕರ ಪ್ರತಿನಿಧಿಗಳ ಮೇಲೆ ಯಾವುದೇ ರೀತಿಯ ಆಧಾರ ರಹಿತ ಆಪಾದನೆಯನ್ನು ಮಾಡುತ್ತಿರುವುದು ಸಚಿವರಿಗೆ ಶೋಭೆ ಯಲ್ಲ.ಅವರು ಕೂಡಲೇ ತಮ್ಮ ಮಾತನ್ನು ಹಿಂತೆಗೆಯ ಬೇಕು.ಇಲ್ಲದಿದ್ದರೆ ಇದರ ಬಗ್ಗೆ ಎಸ್ಡಿಎಂಸಿ ಸಮನ್ವಯ ವೇದಿಕೆಯು ಹೋರಾಟ ಮಾಡ ಬೇಕಾಗುತ್ತದೆ ಎಂದು ಎಸ್ಡಿಎಂಸಿ ಸಮನ್ವಯ ವೇದಿಕೆಯ ಅಧ್ಯಕ್ಷ ಮೊಯ್ದಿನ್ ಕುಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.