ಬೆಂಗಳೂರು –
ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ ಸ್ಫೋಟದ ಬೆನ್ನಲ್ಲೇ ಇದೀಗ ಮಿತ್ರ ಮಂಡಳಿಯ ಎಲ್ಲಾ ಸಚಿವರಿಗೂ ನಡುಕ ಶುರುವಾಗಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಕೋರ್ಟ್ ಮೊರೆ ಹೋಗಿದ್ದಾರೆ ಇದು ಒಂದು ವಿಚಾರವಾದರೆ ಇನ್ನೂ ಹೀಗೆ ಅನಾವಶ್ಯಕವಾಗಿ ನ್ಯಾಯಾಲಯಕ್ಕೆ ಹೀಗೆ ಹೋಗಿರುವ ಆರು ಸಚಿವರ ವಿರುದ್ಧ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದಗೌಡ, ಸಚಿವರು ಅನಗತ್ಯವಾಗಿ ಕೋರ್ಟ್ ಮೊರೆ ಹೋಗುವ ಮೂಲಕ ಗೊಂದಲು ಸೃಷ್ಟಿಸಬಾರದು. ಹೀಗೆ ಅನಗತ್ಯವಾಗಿ ಕೋರ್ಟ್ ಮೆಟ್ಟಿಲೇರುವುದರಿಂದ ಏನೋ ವಿಷಯವಿರಬೇಕು ಅದಕ್ಕಾಗಿಯೇ ಕೋರ್ಟ್ ಮೊರೆ ಹೋಗಿದ್ದಾರೆ ಎಂಬ ಅನುಮಾನ, ಗೊಂದಲಗಳು ಸೃಷ್ಟಿಯಾಗುವಂತಾಗುತ್ತದೆ ಎಂದರು