ಶಿಕ್ಷಕಿಗೆ ಮುದ್ದಾದ ಭಾಷೆಯಲ್ಲಿ ಧಮ್ಕಿ ಹಾಕಿದ್ಲು ಪುಟ್ಟ ಪೋರಿ ಸಖತ್ ವೈರಲ್ ಆಗಿದೆ ಬಾಲಕಿಯ ವಿಡಿಯೋ…..

Suddi Sante Desk

ಬೆಂಗಳೂರು –

ಮಕ್ಕಳು ಏನು ಮಾಡಿದ್ರೂ ಅದು ಚಂದವೇ ಚಂದ ಇನ್ನೂ ಮಕ್ಕಳ ಮಾತು,ನಗು,ಡ್ಯಾನ್ಸ್ ಹೀಗೆ ಅವರೇನೇ ಮಾಡಿ ದ್ರೂ ಎಲ್ಲರಿಗೂ ಇಷ್ಟವಾಗುತ್ತೆ.ಅದರಲ್ಲೂ ಇತ್ತೀಚೆಗಿನ ಮಕ್ಕಳಂತೂ ತುಂಬಾನೇ ಫಾಸ್ಟ್.ಬಹಳ ಚುರುಕಾಗಿರು ತ್ತಾರೆ.ಯಾರಾದ್ರೂ ಮಾತನಾಡುವುದನ್ನು ಮಕ್ಕಳೇನಾದ್ರೂ ಕೇಳಿಸಿಕೊಂಡ್ರೆ, ಇದ್ದಿದ್ದನ್ನು ಇದ್ದ ಹಾಗೆಯೇ ಹೇಳಿ ಬಿಡು ತ್ತಾರೆ ಇದಕ್ಕೆ ತಾಜಾ ಉದಾಹರಣೆ

ಹೌದು ಇಂಥದ್ದೇ ಒಂದು ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಪುಟ್ಟ ಬಾಲೆ ತನ್ನ ಮುದ್ದಾದ ಭಾಷೆಯಲ್ಲಿ ಶಿಕ್ಷಕಿಗೇ ಧಮ್ಕಿ ಹಾಕಿದ್ದಾಳೆ.ಪುಟ್ಟ ಬಾಲಕಿಯೊಬ್ಬಳು ತರಗತಿಯಲ್ಲಿ ತನ್ನ ಟೀಚರ್ ರೊಂದಿಗೆ ಮಾತನಾಡುತ್ತಾ ತನಗೆ ರೆಸ್ಪೆಕ್ಟ್ ಕೊಟ್ಟಿಲ್ಲ ಅಂತಾ ದಬಾಯಿಸಿದ್ದಾಳೆ.ಟೀಚರಮ್ಮ ಎಷ್ಟು ಹೇಳಿದ್ರೂ ಕೇಳದ ಮಗುವಿಗೆ ತಾನು ಕೋಲು ತೆಗೆದು ಕೊಂಡು ಹೊಡೆಯಬೇಕಾ ಅಂತಾ ಕೇಳಿದ್ದಾರೆ.ಇದರಿಂದ ಬೆದರಿದ ಬಾಲೆ,ತನಗೆ ಹೊಡೆದ್ರೆ ಬೇರೆ ಮಕ್ಕಳಿಗೆ ಹೊಡೆ ಯುವುದಾಗಿ ಹೇಳಿದ್ದಾಳೆ.

ಮಗುವನ್ನು ಸಂತೈಸುವಲ್ಲಿ ಟೀಚರಮ್ಮ ಮಾತ್ರ ಫುಲ್ ಸುಸ್ತು ಆಗಿದಂತಿದೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು ನೆಟ್ಟಿಗರಲ್ಲಿ ಕೆಲವರು ಪಾಸಿಟಿವ್ ಆಗಿ ಪ್ರತಿಕ್ರಿಯಿಸಿದ್ರೆ ಇನ್ನು ಕೆಲವರು ನೆಗೆಟಿವ್ ಕಾಮೆಂಟ್ ಗಳನ್ನು ಮಾಡಿದ್ದಾರೆ.ಇನ್ನೂ ಕೆಲ ವರು ವಿಡಿಯೋವನ್ನು ತಮಾಷೆಯಾಗಿ ನೋಡಿದ್ದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.