ಸಮಾಜಕ್ಕೆ ಬುದ್ದಿ ಹೇಳುವ ಸಮಾಜ ಕಲ್ಯಾಣ ಸಚಿವರಿಂದ ಇಂತಾ ಕೆಲಸಾ – ವೈರಲ್ ಆಗಿದೆ ಸಮಾಜ ಕಲ್ಯಾಣ ಸಚಿವರು ಮಾಡಿದ ಕೆಲಸದ ವಿಡಿಯೋ ಹೌದು ಸಾಮಾನ್ಯವಾಗಿ ಜನ ಪ್ರತಿನಿಧಿಗಳು ಅಂದರೆ ನಾಲ್ಕಾರು ಜನರಿಗೆ ಮಾದರಿಯಾಗಿರಬೇಕು ಮೆಚ್ಚುವಂತಹ ಕೆಲಸ ಕಾರ್ಯಗಳನ್ನು ಮಾಡುತ್ತಿರಬೇಕು.
ಆದರೆ ರಾಜ್ಯದ ಸಮಾಜ ಕಲ್ಯಾಣ ಸಚಿವ ಹೆಚ್ ಸಿ ಮಹದೇವಪ್ಪ ನವರು ತಮ್ಮ ಅಂಗರಕ್ಷಕರಿಂದ ಶೂ ಹಾಕಿಸಿಕೊಂಡು ಈಗ ಸುದ್ದಿಯಾಗಿದ್ದಾರೆ. ಹೌದು ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ನವರು ಈಗ ಇಂತಹದೊಂದು ಕೆಲಸವನ್ನು ಮಾಡಿಸಿಕೊಂಡು ತಮ್ಮ ಭದ್ರತೆಗೆ ಇರುವರಿಂದ ಅಮಾನುಷವಾಗಿ ನಡೆಸಿಕೊಂಡಿದ್ದಾರೆ.
ಸಧ್ಯ ಧಾರವಾಡ ಜಿಲ್ಲೆಯ ಪ್ರವಾಸದಲ್ಲಿರುವ ಸಚಿವರು ಧಾರವಾಡದಲ್ಲಿ ಕಾರ್ಯಕ್ರಮ ವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಮಯ ದಲ್ಲಿ ತಮ್ಮ ಅಂಗ ರಕ್ಷಕರಿಂದ ಶೂ ಗಳನ್ನು ಹಾಕಿಸಿಕೊಂಡಿದ್ದಾರೆ.ಧಾರವಾಡದಲ್ಲಿಯ ಹಾಸ್ಟೆಲ್ ಗಳ ಭೇಟಿ ನೀಡಿ ಹೊರಗೆ ಬರುವಾಗ ಅಂಗರಕ್ಷಕನ ಕಡೆಯಿಂದ ಶೂ ಹಾಕಿಸಿಕೊಂಡು ಸಚಿವಗಿರಿ ಮೆರೆದಿದ್ದಾರೆ.ನಗರದಲ್ಲಿನ ಸಪ್ತಾಪುರ ದಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ನ ಅಡುಗೆ ಮನೆಗೆ ಹೋಗುವಾಗ ಒಳ್ಳೆಯ ಸುಸಂಸ್ಕೃತರಂತೆ ಶೂ ಹೊರಗೆ ಬಿಟ್ಟು ಒಳಗೆ ಹೋಗಿ ವಾಪಾಸ್ಸು ಹೊರಗೆ ಬಂದ ಮೇಲೆ ತಮ್ಮ ಶೂ ಗಳನ್ನು ತಾವೇ ಹಾಕಿಕೊಳ್ಳುವ ಬದಲಾಗಿ ತಮ್ಮ ಅಂಗರಕ್ಷಕನ ಕಡೆಯಿಂದ ಶೂ ಹಾಕಿಸಿ ಕೊಂಡು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾ ಗಿದ್ದಾರೆ.
ಸಧ್ಯ ಈ ಒಂದು ವಿಡಿಯೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ವಿಡಿಯೋ ಗಳು ವೈರಲ್ ಆಗಿದ್ದು ಸಮಾಜ ಕಲ್ಯಾಣ ಸಚಿವರ ಕಾರ್ಯ ವನ್ನು ಸಾರ್ವಜನಿಕರು ಹಿಗ್ಗಾ ಮುಗ್ಗಾ ತರಾಟೆಗೆ ತಗೆದುಕೊಳ್ಳುತ್ದಿದ್ದಾರೆ.ಸಮಾಜಕ್ಕೆ ಮಾದರಿಯಾ ಗಬೇಕಾದ ಸಮಾಜ ಕಲ್ಯಾಣ ಸಚಿವರೇ ಇದೇನಾ ನಿಮ್ಮ ಸಮಾಜ ಮೆಚ್ಚುವ ಕೆಲಸ ಎಂದು ತರಾ ಟೆಗೆ ತಗೆದುಕೊಳ್ಳುತ್ತಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..






















