ನಕಲಿ ಕೀ ಬಳಸಿ ಬೈಕ್ ಕಳ್ಳತನ ಮಾಡುತ್ತಿದ್ದವನನ್ನು ಲಾಕ್ ಮಾಡಿ ವಿದ್ಯಾನಗರ ಪೊಲೀಸರು – ಜಯಂತ್ ಗೌಳಿ ಮಾರ್ಗದರ್ಶನದಲ್ಲಿ ಶ್ರೀಮಂತ ಹುಣಸಿಕಟ್ಟಿ ಮತ್ತು ಕ್ರೈಮ್ ಟೀಮ್ ಕಾರ್ಯಾಚರಣೆ ಗೆ ಮೆಚ್ಚುಗೆ…..

Suddi Sante Desk
ನಕಲಿ ಕೀ ಬಳಸಿ ಬೈಕ್ ಕಳ್ಳತನ ಮಾಡುತ್ತಿದ್ದವನನ್ನು ಲಾಕ್ ಮಾಡಿ ವಿದ್ಯಾನಗರ ಪೊಲೀಸರು – ಜಯಂತ್ ಗೌಳಿ ಮಾರ್ಗದರ್ಶನದಲ್ಲಿ ಶ್ರೀಮಂತ ಹುಣಸಿಕಟ್ಟಿ ಮತ್ತು ಕ್ರೈಮ್ ಟೀಮ್ ಕಾರ್ಯಾಚರಣೆ ಗೆ ಮೆಚ್ಚುಗೆ…..

ಹುಬ್ಬಳ್ಳಿ

ಹುಬ್ಬಳ್ಳಿ ವಿದ್ಯಾನಗರ ಪೋಲೀಸರ ಕಾರ್ಯಾ ಚರಣೆ.ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ ಹೌದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯನ್ನೇ ಕಳ್ಳತದ ಕೇಂದ್ರ ಸ್ಥಾನ ಮಾಡಿಕೊಂಡಿದ್ದ ಅಂತರ ಜಿಲ್ಲಾ ಬೈಕ್ ಕಳ್ಳನನ್ನು ಹೆಡಮುರಿ ಕಟ್ಟುವಲ್ಲಿ ವಿದ್ಯಾನಗರ ಪೋಲೀಸರು ಯಶಸ್ವಿಯಾಗಿದ್ದಾರೆ.

ಸವದತ್ತಿ ಮೂಲದ ಶಂಕರಪ್ಪ ಗಡೇಕರ ಎಂಬಾತ ನಕಲಿ ಕೀ ಬಳಿಸಿ ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ನಿಲ್ಲಿಸಿದ ಬೈಕ್ ಗಳನ್ನು ಕಳ್ಳತನ ಮಾಡಿ ಮಾರಾಟ ಮಾಡತಿದ್ದ.ಬೈಕ್ ಕಳೆದುಕೊಂಡವನು ಕೊಟ್ಟ ದೂರಿನನ್ವಯ ವಿದ್ಯಾನಗರದ ಪಿಆಯ್ ಜಯಂತ ಗೌಳಿ ನಿರ್ಧೇಶನದಂತೆ ಫೀಲ್ಡಿಗಿಳಿದ ಪಿಎಸ್ಆಯ್ ಶ್ರೀಮಂತ ಹುಣಸಿಕಟ್ಟಿ ಆ್ಯಂಡ್ ಖಡಕ್ ಕ್ರೈಂ ಟೀಂ ಆರೋಪಿಯನ್ನು ಸಿನಿಮೀ ಯ ಸ್ಟೈಲ್ ನಲ್ಲಿ ಹಿಡಿಯುವಲ್ಲಿ ಯಶಸ್ವಿಯಾಗಿ ದ್ದಾರೆ.

ಬಂಧಿತನಿಂದ 9 ಹೀರೋ ಹೊಂಡಾ ಬೈಕ್.3 ಸ್ಕೂಟರ್.3 ಬುಲೆಟ್ ಗಳನ್ನು ಹಿಡಿದು ತರುವಲ್ಲಿ ಯಶಸ್ವಿಯಾಗಿದ್ದಾರೆ.ಕಾರ್ಯಾಚರಣೆಯಲ್ಲಿ ಪಿಎಸ್ಆಯ್ ಗಳಾದ ಶ್ರೀಮಂತ ಹುಣಸಿಕಟ್ಟಿ,ಜಿ ಎಸ್ ಕಲ್ಯಾಣಿ ಪರಶುರಾಮ ಹಿರಗಣ್ಣವರ. ಶಿವಾನಂದ ತಿರಕಣ್ಣವರ.ಮಲ್ಲಿಕಾರ್ಜುನ ಧನಿಗೊಂಡ.ಮಂಜುನಾಥ ಯಕ್ಕಡಿ.ವಾಯ್ ಎಮ್ ಶೇಂಡ್ಗೆ.

ಸಯ್ಯದ್ ಅಲಿ ತಹಶಿಲ್ದಾರ. ರಮೇಶ ಹಲ್ಲೆ. ಮಂಜುನಾಥ ಏಣಗಿ.ಶರಣಗೌಡ ಮೂಲಿಮನಿ ಮತ್ತು ಪ್ರಕಾಶ ಟಕ್ಕಣ್ಣವರ ಭಾಗವಹಿಸಿದ್ದರು. ಇನ್ನೂ ಈ ಒಂದು ಕಾರ್ಯಕ್ಕೆ ಹಿರಿಯ ಪೊಲೀಸ್ ಅಧಿಕಾರಿ ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.