ತುಮಕೂರು –
ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರೊಬ್ಬರನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಿರುವ ಘಟನೆ ತುಮ ಕೂರು ತಾಲೂಕಿನ ಬೆಳ್ಳಾವಿ ಬಳಿಯ ಮುದಿಗೇರೆ ಗ್ರಾಮ ದಲ್ಲಿ ನಡೆದಿದೆ.ಮುದಿಗೇರಿ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕ ಗರುಡರಾಜು ನಿವೃತರಾದ ಹಿನ್ನಲೆ ಮೆರವಣಿಗೆ ಮಾಡ ಲಾಗಿದೆ.
ಶಿಕ್ಷಕ ಗರುಡರಾಜು ಮುದಿಗೇರೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 22 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ದೈಹಿಕ ಶಿಕ್ಷಕರಾಗಿದ್ದರೂ ಇತರ ವಿಷಯಗಳ ಪಠ್ಯಗಳನ್ನು ಬೋಧನೆ ಮಾಡುತ್ತಿದ್ದರು.22 ಬ್ಯಾಚ್ನ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು.ಇವರ ಗರಡಿಯಲ್ಲಿ ಓದಿದ್ದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಒಳ್ಳೆಯ ಕೆಲಸಕ್ಕೆ ಸೇರಿದ್ದಾರೆ.ಕೆಲವರು ಸಾಫ್ಟ್ ವೇರ್ ಇಂಜಿನಿಯರ್, ಡಾಕ್ಟರ್ ,ಟೀಚರ್ ಹಾಗೂ ವಿದೇಶದಲ್ಲಿ ಕೆಲಸ ಮಾಡುತ್ತಿ ದ್ದಾರೆ. ಇದೀಗ ಗರುಡರಾಜು ಅವರು ನಿವೃತರಾಗಿದ್ದಾರೆ.
ಹೀಗಾಗಿ ಇಡೀ ಊರಿಗೆ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದ ಗರುಡರಾಜು ದಂಪತಿಯನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಲಾಗಿದೆ.ಜೊತೆಗೆ ಮೂಕ್ಕಾಲು ಕೆ.ಜಿಯ ಬೆಳ್ಳಿ ಕಿರೀಟ ಇಟ್ಟು ಸನ್ಮಾನ ಮಾಡಲಾಗಿದೆ.ಎಲ್ಲಾ ಹಳೆಯ ವಿದ್ಯಾರ್ಥಿ ಗಳು ಸೇರಿ ನಿವೃತ್ತ ಶಿಕ್ಷಕ ಗರುಡರಾಜುಗೆ ಸನ್ಮಾನ ಮಾಡಿ ದ್ದಾರೆ.ವಿದ್ಯಾರ್ಥಿಗಳು ಊರಿನ ಮುಖಂಡರ ಅಪಾರ ಪ್ರೀತಿ ಕಂಡು ಶಿಕ್ಷಕ ಗರುಡರಾಜು ಕಣ್ಣೀರು ಹಾಕಿದ್ದಾರೆ. ಮುದಿ ಗೆರೆ ಗ್ರಾಮದ ಹಬ್ಬದ ವಾತಾವರಣವಾಗಿದ್ದು ಊರಿನ ಜನರಿಗೆ ಹೋಳಿಗೆ ಊಟ ಹಾಕಲಾಗಿದೆ.