ಹಾಸನ –
ಶಿಕ್ಷಕರು ದಾರಿ ತೋರಿಸುವ ಗುರುಗಳು ಭವಿಷ್ಯದ ಪ್ರಜ್ಞೆ ಗಳನ್ನು ರೂಪಿಸುವ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕ ಶಿಕ್ಷಕಿಯರ ಮೇಲಿದೆ.ಶಾಲೆಯಲ್ಲಿ ಮಕ್ಕಳು ತಪ್ಪು ಮಾಡಿ ದಾಗ ತಿದ್ದುವ ಜಗಳ ಮಾಡಿಕೊಂಡಾಗ ಬುದ್ಧಿ ಹೇಳಿ ಮಕ್ಕಳಲ್ಲಿ ಶಿಸ್ತನ್ನು ಮೂಡಿಸುವವರು ಶಿಕ್ಷಕರು.ಇದೇ ಕಾರಣಕ್ಕೆ ಗುರುಗಳಿಗೆ ನಮ್ಮಲ್ಲಿ ದೇವರ ಸ್ಥಾನವಿದೆ. ಆದರೆ ಇಂತಹ ಪವಿತ್ರ ಸ್ಥಾನದಲ್ಲಿರುವ ಶಿಕ್ಷಕಿಯರೇ ತಪ್ಪು ಮಾಡಿ ದರೆ ಹೇಗೆ ಆದರೆ ಇಲ್ಲಿನ ಶಿಕ್ಷಕಿಯರಿಬ್ಬರು ಮಕ್ಕಳ ಎದುರೇ ಪ್ರತಿನಿತ್ಯ ಜಗಳ ಮಾಡಿಕೊಳ್ಳುತ್ತಿದ್ದಾರೆ.

ಪುಟ್ಟ ಮಕ್ಕಳು ಆಟಿಕೆಗಾಗಿ ತಮ್ಮ ಇಷ್ಟದ ವಸ್ತುವಿಗಾಗಿ ಹಠ ಹಿಡಿದು ಜಗಳ ಮಾಡಿಕೊಳ್ಳುವುದು ಸಾಮಾನ್ಯ. ಆದರೆ ಸಕಲೇಶಪುರ ತಾಲೂಕಿನ ಕೆರೋಡಿ ಗ್ರಾಮದಲ್ಲಿ ರುವ ಸರ್ಕಾರಿ ಪ್ರಾಥಮಿಕ ಶಾಲೆಯ ಇಬ್ಬರು ಶಿಕ್ಷಕಿಯರು ಪ್ರತಿನಿತ್ಯ ಶಾಲೆಯಲ್ಲಿ ಜಗಳವಾಡಿಕೊಳ್ಳುತ್ತಿದ್ದಾರಂತೆ. ಸಂದ್ಯಾ ಹಾಗೂ ಗೀತಾಂಜಲಿ ಎಂಬ ಇಬ್ಬರು ಶಿಕ್ಷಕಿಯರು ತಮ್ಮ ವೈಯಕ್ತಿಕ ಕಾರಣಕ್ಕೆ ಪ್ರತಿನಿತ್ಯ ಶಾಲೆಗೆ ಬಂದು ಜಗಳ ಮಾಡಿಕೊಳ್ಳುತ್ತಿದ್ದು ಕೆಲವು ಬಾರಿ ಸೌಟು-ಪಾತ್ರೆ ಹಿಡಿದುಕೊಂಡು ಹೊಡೆದಾಡಿಕೊಂಡಿದ್ದಾರಂತೆ.ಇದರಿಂದ ಶಾಲೆಯ ಮಕ್ಕಳು ಹಾಗೂ ಪೋಷಕರು ಬೇಸತ್ತು ಹೋಗಿ ದ್ದಾರೆ.ಕೆರೋಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 25 ಮಕ್ಕಳಿದ್ದಾರೆ.ಮಕ್ಕಳಿಗೆ ಬುದ್ಧಿ ಹೇಳಬೇಕಾದ ಶಿಕ್ಷಕಿ ಯರೇ ಪ್ರತಿನಿತ್ಯ ಜಗಳವಾಡಿಕೊಳ್ಳುತ್ತಿರುವುದರಿಂದ ಬೇಸತ್ತ ಪೋಷಕರು ತಮ್ಮ ಟಿಸಿ ಕೊಡಿ.ನಾವು ನಮ್ಮ ಮಕ್ಕಳು ಬೇರೆ ಶಾಲೆಗೆ ಸೇರಿಸುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.ಪೋಷಕರ ಮೀಟಿಂಗ್ನಲ್ಲೂ ಕೂಡ ಶಿಕ್ಷಕಿ ಯರು ಕಿರುಚಾಡಿದ್ದು ಸದ್ಯ ಬೈಗುಳ ವಿಡಿಯೋ ಸಾಮಾ ಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಈ ಬಗ್ಗೆ ಶಿಕ್ಷಣ ಇಲಾಖೆಗೆ ದೂರು ಕೊಟ್ಟರೂ ಏನು ಪ್ರಯೋಜನವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.ಒಟ್ಟಾರೆಯಾಗಿ ಮಕ್ಕಳು ತಪ್ಪು ಮಾಡಿದಾಗ ಅಥವಾ ಜಗಳ ಮಾಡಿಕೊಂಡಾಗ ಬುದ್ಧಿ ಹೇಳಿಬೇಕಾದ ಶಿಕ್ಷಕಿಯರೇ ಶಾಲೆಯಲ್ಲಿ ಈ ರೀತಿ ಜಗಳ ಹಾಗೂ ಹೊಡೆದಾಡಿಕೊಂಡರೆ ಹೇಗೆ ಸಂಬಂಧಿಸಿದ ಅಧಿಕಾರಿಗಳು ಇನ್ನಾದರೂ ಈ ಸಮಸ್ಯೆ ಬಗ್ಗೆ ಗಮನಹರಿ ಸಬೇಕಿದೆ.