ಉಡುಪಿ –
ರಾಜ್ಯಾದ್ಯಂತ ಇಂದು ಶಾಲೆಗಳು ಆರಂಭವಾಗಿದ್ದು ಇನ್ನೂ ಉಡುಪಿಯಲ್ಲಿ ಶಾಲೆಗೆ ಮಕ್ಕಳನ್ನು ವಿಶೇಷವಾಗಿ ಬರಮಾಡಿಕೊಳ್ಳಲಾಯಿತು.

ಬರೊಬ್ಬರಿ ಒಂದು ವರುಷದ ಮೇಲೆ ಆರಂಭಗೊಂಡ ಶಾಲೆಗಳಿಗೆ ಮಕ್ಕಳನ್ನು ತುಂಬಾ ವಿಶೇಷವಾಗಿ ಬರಮಾಡಿಕೊಳ್ಳಲಾಯಿತು.
ಉಡುಪಿ ಜಿಲ್ಲೆ ಕಾಪು ತಾಲೂಕಿನ ಮಜೂರು ಕರಂದಾಡಿ ಶ್ರೀ ರಾಮ ಹಿರಿಯ ಪ್ರಾಥಮಿಕ ಅನುದಾನಿತ ಶಾಲೆಯ ಮಕ್ಕಳನ್ನು ಮೆರವಣಿಗೆ ಮೂಲಕ ಶಾಲೆಗೆ ಬರಮಾಡಿಕೊಳ್ಳಲಾಯ್ತು.
ವಾದ್ಯ, ನಗಾರಿ, ಮೂಲಕ ವಿದ್ಯಾರ್ಥಿಗಳನ್ನು ಸ್ವಾಗತ ಮಾಡಲಾಯಿತು.ನಂತರ ಎಲ್ಲರೂ ಸೇರಿಕೊಂಡು ಶಾಲೆಗೆ ಬರಮಾಡಿಕೊಂಡು ನಂತರ ತರಗತಿಯೊಳಗೆ ಕಳುಹಿಸಿಕೊಡಲಾಯ್ತು.
ಶಾಲಾಭಿಮಾನಿಗಳು, ಹಳೆ ವಿದ್ಯಾರ್ಥಿಗಳು, ಶಾಲಾ ಆಡಳಿತ ಮಂಡಳಿ ಮತ್ತು ಗ್ರಾಮಸ್ಥರು ಸೇರಿಕೊಂಡು ಶಾಲೆಗೆ ಬನ್ನಿ ಮಕ್ಕಳೆ ಎಂದು ಬರಮಾಡಿಕೊಂಡು ಮಕ್ಕಳನ್ನು ಮೆರವಣಿಗೆ ಮೂಲಕ ಕರೆದುಕೊಂಡು ಬಂದರು.