ಕಲಬುರ್ಗಿ –
ಹಳೆಯ ಕೆಟ್ಟುಹೋಗಿದ್ದ ಬೋರವೆಲ್ ನಿಂದ 30 ಅಡಿ ಎತ್ತರಕ್ಕೇ ನೀರು ಜಿಗಿಯುತ್ತಿರುವ ಘಟನೆಯೊಂದು ಕಲಬುರ್ಗಿ ಯಲ್ಲಿ ಕಂಡು ಬಂದಿದೆ.ಹೌದು ಭೂಮಿಯೊಳಗೊಂದು ವಿಸ್ಮಯವಾಗಿ ಕಂಡು ಬಂದಿದೆ. .ಹಳೆಯ ಕೆಟ್ಟ ಬೋರವೆಲ್ ನಿಂದ 30 ಅಡಿ ಎತ್ತರದಲ್ಲಿ ತನ್ನಿಂದ ತಾನೇ ಧಾರಾಕಾರವಾಗಿ ನೀರು ಚಿಮ್ಮುತ್ತಿರುವ ದೃಶ್ಯಗಳು ಕಂಡು ಬಂದಿತು.

ಜಲಧಾರೆಹನಿ ನೀರಿಗೆ ಪರದಾಡುತ್ತಿರುವ ಗ್ರಾಮದಲ್ಲಿ ಗಂಗೆಯ ಕೃಪೆ ಕಂಡು ಇಡೀ ಕಡಣಿ ಗ್ರಾಮಸ್ಥರು ದಿಗ್ಬ್ರಮೆಗೊಂಡಿದ್ದಾರೆ.ಕಲಬುರಗಿ ತಾಲೂಕಿನ ಕಡಣಿ ಗ್ರಾಮದಲ್ಲಿ ಈ ಒಂದು ವಿಸ್ಮಯ ಕಂಡು ಬಂದಿದೆ.


ಗ್ರಾಮಸ್ಥರಿಗಾಗಿ ಗ್ರಾಮ ಪಂಚಾಯತ್ ವತಿಯಿಂದ 3 ವರ್ಷದ ಹಿಂದೆ ತೋಡಲಾಗಿದ್ದ ಬೋರ್ ವೇಲ್ ನಲ್ಲಿ ಆಗ ನೀರು ಬರೆದಿರುವ ಕಾರಣ ಪಾಳು ಬಿದ್ದಿತ್ತು ಈಗ ಮತ್ತೆ ಪಂಪ್ಸೆಟ್ ಅಳವಡಿಕೆ ಮಾಡಿ ಪಂಚಾಯತ್ ಸಿಬ್ಬಂದಿಗಳಿಂದ ಪ್ರಯತ್ನ ಮಾಡಲಾಗಿದೆ.

ಈ ಸಂದರ್ಭದಲ್ಲಿ 20 ಅಡಿಗೂ ಹೆಚ್ಚು ಗಗನದತ್ತ ಚಿಮ್ಮುತ್ತಿರುವ ನೀರು ನಿನ್ನೆ ಎರಡೂವರೆ ಗಂಟೆಗೂ ಹೆಚ್ಚುಕಾಲ ಚಿಮ್ಮಿದ ನೀರು ಇಂದು ಮತ್ತೆ ತಾನಾಗಿಯೇ ಮುಗಿಲೆತ್ತರಕ್ಕೆ ಜೋರಾಗಿ ಕೊಳಮೆ ಪೈಪ್ ಗಳ ಮೂಲಕ ಜಿಗಿಯುತ್ತಿರುವ ಚಿತ್ರಣ ಕಂಡು ಬಂದಿತು.

ಬೋರ್ ವೇಲ್ ನೀರು ಗಂಗೆಯ ನಾಟ್ಯ ಕಂಡು ಬೆರಗಾದ ಕಡಣಿ ಗ್ರಾಮಸ್ಥರು ಕಾರಂಜಿ ರೀತಿಯಲ್ಲಿ ನೀರು ತಾನಾಗಿಯೇ ಪುಟಿಯುತ್ತಿರುವುದನ್ನು ಕಾಣಲು ಮುಗಿಬಿದ್ದಿರುವ ಚಿತ್ರಣ ಕಂಡು ಬಂದಿತು.