ಮೈಸೂರು –
ಮೈಸೂರಿನಲ್ಲಿ ಕ್ರೂರಿ ಕೊರೊನಾ ಅಟ್ಟಹಾಸ ಮೆರೆದಿದೆ.ಹೌದು ಪತ್ನಿ ತಿಥಿ ದಿನವೇ ಪತಿ ಕೂಡ ಸಾವಿಗೀಡಾಗಿದ್ದಾರೆ.ನಗರದ ಗಂಗೋತ್ರಿ ಲೇಔಟ್ ನ ಕೆ.ಸುಷ್ಮ(37)ಡಿ. ಪ್ರಸನ್ನ (44) ಸಾವಿಗೀಡಾದ ದಂಪತಿಗಳಾಗಿದ್ದಾರೆ.ದಂಪತಿಗಳ ಸಾವಿನಿಂದಾಗಿ ಈಗ ಇವರ ಇಬ್ಬರು ಮಕ್ಕಳಿಬ್ಬರು ಅನಾಥರಾಗಿ ದ್ದಾರೆ.

ಹೌದು ಹಾಸನ ಸರ್ಕಾರಿ ಕಾಲೇಜಿನಲ್ಲಿ ಅಥಿತಿ ಉಪನ್ಯಾಸಕಿಯಾಗಿದ್ದ ಕೆ.ಸುಷ್ಮ.ತೋಟಗಾರಿಕೆ ವಿವಿಯಲ್ಲಿ ತಾತ್ಕಾಲಿಕ ಚಾಲಕನಾಗಿದ್ದ ಡಿ. ಪ್ರಸನ್ನ ಮೃತರಾದವರಾಗಿದ್ದಾರೆ. ತಿಂಗಳ ಹಿಂದಷ್ಟೇ ಪತಿ ಪ್ರಸನ್ನಗೆ ಸೋಂಕು ಕಾಣಿಸಿಕೊಂಡಿದ್ದಿತ್ತು. ಪತಿ ಯನ್ನು ಉಳಿಸಿಕೊಳ್ಳಲು ಪತ್ನಿ ಸುಷ್ಮ ಪ್ರಯತ್ನ ಮಾಡಿದರು.ಮನೆಯಲ್ಲಿಯೇ ಹೋಂ ಕ್ವಾರಂಟೈನ್ ನಲ್ಲಿ ಇದ್ದರು ದಂಪತಿಗಳು.ಕೊರೊನಾ ಉಲ್ಬಣ ಗೊಂಡ ಹಿನ್ನಲೆ ಮೆ.16 ರಂದು ಸಾವನ್ನಪ್ಪಿದ್ದರು ಪತ್ನಿ ಸುಷ್ಮ

ಮೇಟಗಳ್ಳಿ ಕೋವಿಡ್ ಕೇಂದ್ರಕ್ಕೆ ದಾಖಲಾಗಿದ್ದ ಪ್ರಸನ್ನ.ಅತ್ತ ಇಂದು ಪತ್ನಿ ತಿಥಿ ಕಾರ್ಯದ ವೇಳೆ ಸಾವನ್ನಪ್ಪಿದ್ದಾನೆ ಪತಿ ಪ್ರಸನ್ನ.ಇನ್ನೂ ದಂಪತಿಗಳ ಸಾವಿನಿಂದಾಗಿ ಸಧ್ಯ ಇವರ ಇಬ್ಬರು ಮಕ್ಕಳಾದ
14 ವರ್ಷದ ಪಿ. ಹರ್ಷ, 12 ವರ್ಷದ ನಯನ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.