ತಾಯಿಗಾಗಿ ಚಂದ್ರನ ಮೇಲೆ ನಿವೇಶನ ಖರೀದಿಸಿದ ಮಹಿಳೆ – ಅಪರೂಪರ ಗಿಪ್ಟ್ ಖರೀದಿಸಿ ತಾಯಿಗೆ ಕೊಡುಗೆ ನೀಡಿದ ಮಹಿಳೆ…..

Suddi Sante Desk
ತಾಯಿಗಾಗಿ ಚಂದ್ರನ ಮೇಲೆ ನಿವೇಶನ ಖರೀದಿಸಿದ ಮಹಿಳೆ – ಅಪರೂಪರ ಗಿಪ್ಟ್ ಖರೀದಿಸಿ ತಾಯಿಗೆ ಕೊಡುಗೆ ನೀಡಿದ ಮಹಿಳೆ…..

ಕರಿಂನಗರ

ಸಾಮಾನ್ಯವಾಗಿ ಯಾರಾದರೂ ಅಮ್ಮನಿಗೆ ಗಿಫ್ಟ್ ಕೊಡಬೇಕೆಂದರೆ ಯಾವುದಾದರೂ ಐಷಾರಾಮಿ ಕಾರು,ಇಲ್ಲವೇ ದುಬಾರಿ ಸೀರೆ,ಅಥವಾ ಚಿನ್ನ, ಮೊಬೈಲ್​ ಮತ್ತಿತರ ವಸ್ತುಗಳನ್ನು ನೀಡುತ್ತಾರೆ. ಆದರೆ ಇಲ್ಲೊಬ್ಬ ಮಗಳು ತನ್ನ ತಾಯಿಗಾಗಿ ಚಂದ್ರನ ಮೇಲೆ ನಿವೇಶನವನ್ನು ಖರೀದಿಸಿ ತಾಯಿ ಗೆ ಸರಪ್ರೈಜ್ ನೀಡಿ ಎಲ್ಲರೂ ಹುಬ್ಬೆರಿಸು ವಂತೆ ಮಾಡಿದ್ದಾಳೆ.

ಹೌದು ಪೆದ್ದಪಲ್ಲಿ ಜಿಲ್ಲೆಯ ಗೋದಾವರಿಖಾನಿಯ ಸುದ್ದಲ ರಾಮಚಂದ್ರ ಮತ್ತು ವಕುಲಾದೇವಿ ದಂಪತಿಯ ಹಿರಿಯ ಪುತ್ರಿ ಸಾಯಿ ವಿಜನಾಥ ಎಂಬುವರು USAಯ ಅಯೋವಾದಲ್ಲಿ ಗವರ್ನರ್ ಕಿಮ್ ರೆನಾಲ್ಡ್ಸ್ ಅವರ ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ಹಣಕಾಸು ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ.

ಅಮ್ಮನಿಗೆ ಕೊಂಚ ವೆರೈಟಿಯಾಗಿರುವ ಬೆಲೆ ಬಾಳುವ ಉಡುಗೊರೆ ಕೊಡುವ ಐಡಿಯಾ ಬಂದಿದೆ.ನಿರೀಕ್ಷೆಯಂತೆ, ತಾಯಿ ವಕುಲಾದೇವಿ ಹೆಸರಿನಲ್ಲಿ ಮಗಳು 2022ರಲ್ಲಿ ನೋಂದಣಿ ಮೂಲಕ ಚಂದ್ರನಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರು.ಕಾಕತಾಳೀಯವೆಂಬಂತೆ ಭಾರತ ದಲ್ಲಿ ಚಂದ್ರಯಾನ-3 ಯಶಸ್ವಿಯಾಗಿ ಭೂಸ್ಪರ್ಶ ಮಾಡಿ ಇತಿಹಾಸ ಸೃಷ್ಟಿಸಿದೆ

ಆಗಸ್ಟ್ 23ರಂದೇ ಈ ನಿವೇಶನವು ಅವರ ಹೆಸರಿನಲ್ಲಿ ನೋಂದಣಿಯಾಗಿದೆ.ಅದೇ ದಿನ ತಾಯಿಯ ಹೆಸರಿಗೆ ಪ್ಲಾಟ್ ನೋಂದಣಿಯಾಗಿ ದ್ದರಿಂದ ಮಗಳ ಸಂತೋಷಕ್ಕೆ ಮಿತಿಯೇ ಇರಲಿಲ್ಲ ಇದರೊಂದಿಗೆ ಆಕೆಯ ಅಪರೂಪದ ಉಡುಗೊರೆಯಾಗಿ ಇತಿಹಾಸದಲ್ಲಿ ಉಳಿಯಲಿದೆ

ಆದರೆ ಅಲ್ಲಿ ಖರೀದಿಸಿದ ಭೂಮಿ ಎಷ್ಟು ಅದರ ಬೆಲೆ ಎಷ್ಟು ಎಂಬುದು ತಿಳಿಯಬೇಕಿದ್ದು ಅನೇಕ ರು ತಮ್ಮ ಪ್ರತಿಷ್ಠೆಗಾಗಿ ಅಲ್ಲಿ ನಿವೇಶನ ಖರೀದಿ ಸುತ್ತಿದ್ದಾರೆ.ಬಾಲಿವುಡ್​ನ ಹಲವು ನಟರು ಈಗಾಗಲೇ ಚಂದಮಾಮದಲ್ಲಿ ನಿವೇಶನ ಖರೀದಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಕರಿಂನಗರ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.