ವರ್ಗಾವಣೆಗೊಂಡ ದಿನವೇ ಶಾಲೆಗೆ ಈ ಶಿಕ್ಷಕ ಮಾಡಿದ ಕೆಲಸ ಮರೆಯಲಾಗದಂತದ್ದು – ಶಿಕ್ಷಕ ಕೆ ಬಿ ಕುರಹಟ್ಟಿ ಕಾರ್ಯಕ್ಕೆ ಮೆಚ್ಚುಗೆ

Suddi Sante Desk

ಜೋಯಿಡಾ –

ಎರಡು ವರ್ಷಗಳ ಕಾಲ ದೈಹಿಕ ಶಿಕ್ಷಕರಾಗಿ ವರ್ಗಾವಣೆ ಗೊಂಡ ದೈಹಿಕ ಶಿಕ್ಷಕ ಕೆ ಬಿ ಕುರಹಟ್ಟಿ ಯವರು ಶಾಲೆಗೆ ಮರೆಯಲಾಗದ ಅದರಲ್ಲೂ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತಹ ಕೆಲಸವನ್ನು ಮಾಡಿದ್ದಾರೆ.ಹೌದು ಸರ್ಕಾರಿ ಶ್ರೀರಾಮ ಪ್ರೌಢಶಾಲೆ ಜೋಯಿಡಾ ಶೈಕ್ಷಣಿಕ ಜಿಲ್ಲೆ ಶಿರಸಿ (ಉಕ)ಇಲ್ಲಿಂದ ವರ್ಗಾವಣೆಗೊಂಡಿದ್ದಾರೆ.ಹೀಗಾಗಿ ಶಾಲೆಯಲ್ಲಿ ಮಕ್ಕಳಿಗೆ ತುಂಬಾ ಅವಶ್ಯಕತೆ ಇರುವ ಹಾಗೇ ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಕೆಲಸವನ್ನು ಮಾಡಿ ವರ್ಗಾವಣೆಗೊಂಡಿದ್ದಾರೆ

ಕ್ರೀಡೆ ಇಲ್ಲದ ಜೀವನ ಕೀಡೆ ತಿಂದ ಹಾಗೆ ಎಂಬ ಮಾತಿನಂತೆ ಈ ಒಂದು ಶಾಲೆಯಲ್ಲಿ ಯಾವುದೇ ಕ್ರೀಡಾ ಸೌಲಭ್ಯಗಳು ಇಲ್ಲದೆ ಅನಾಥವಾಗಿ ಇಲ್ಲಿನ ಮಕ್ಕಳಿಗೆ ಸಾಕಷ್ಟು ಪ್ರಮಾಣ ದಲ್ಲಿ ತೊಂದರೆಯಾಗಿತ್ತು ಇದನ್ನು ಅರಿತ ಇವರು ಲಾಂಗ್ ಜಂಪ್ ಅಂಕಣವನ್ನು ಮಾಡಿಸಿದ್ದಾರೆ

ಹೌದು ಯಾವುದೇ ಸವಲತ್ತುಗಳನ್ನೂ ಕೊಡದೇ ಓಲಂಪಿಕ್ ಅಲ್ಲಿ ನೂರಾರು ಪದಕಗಳನ್ನು ಬಯಸುವ ಬಂಧುಗಳಲ್ಲಿ ಹಾಗೂ ಶಿಕ್ಷಣ ಪ್ರೇಮಿಗಳಲ್ಲಿ ನನ್ನ ಮನವಿ ಎನ್ನುತ್ತಾ ಇವರು ತಳ ಹಂತದಿಂದಲೇ ಎಲ್ಲ ಸವಲತ್ತು ಗಳನ್ನು ಒದಗಿಸಿ ನೋಡಿ ನಾವೇ ಮೊದಲ ಸ್ಥಾನದಲ್ಲಿ ಇರುತ್ತೇವೆ ಎನ್ನುತ್ತಾ ಎಲ್ಲವನ್ನೂ ಸರ್ಕಾರವೇ ಒದಗಿ ಸೋದೇ ಆದರೆ ಅಲ್ಲಿ ನಮ್ಮ ಕರ್ತವ್ಯವೇನು ಎಂದು ಕೊಂಡು ದೊಡ್ಡ ಕೆಲಸಕ್ಕೆ ಕೈ ಹಾಕಿ ಈಗ ನಿರ್ಮಾಣ ಮಾಡಿದ್ದಾರೆ

ಮಕ್ಕಳ ಕ್ರೀಡೆಗೆ ಮೊದಲು ಸಕಲ ಸವಲತ್ತುಗಳೂ ಸಿಗಬೇಕು ಆ ಸವಲತ್ತುಗಳನ್ನು ಒದಗಿಸಿದ ನಂತರ ಮಕ್ಕಳು ತಮ್ಮ ಆರೋಗ್ಯ ವೃದ್ಧಿಸಿ ಗೊಂಡು ಕ್ರೀಡೆಯಲ್ಲಿ ಪರಿಣಿತರಾಗಿ ದೇಶಕ್ಕೆ ಕೀರ್ತಿ ತರುವ ಹೆಮ್ಮೆಯ ಕ್ರೀಡಾ ಪಟುಗಳು ಆಗಬೇಕು ಅನ್ನುವ ನಿಟ್ಟಿನಲ್ಲಿ ಈ ಒಂದು ಕಾರ್ಯವನ್ನು ದೈಹಿಕ ಶಿಕ್ಷಕರಾಗಿ ಸ್ಥಾನದಲ್ಲಿ ನಿಂತುಕೊಂಡು ಮಾಡಿದ್ದಾರೆ

ಸರ್ಕಾರಿ ಶ್ರೀರಾಮ ಪ್ರೌಢಶಾಲೆ ಜೋಯಿಡಾ ಶೈಕ್ಷಣಿಕ ಜಿಲ್ಲೆ ಶಿರಸಿ(ಉಕ)1964 ರಲ್ಲಿ ಹುಟ್ಟಿದ ಹಳೆಯ ಪ್ರೌಢಶಾಲೆ ನಮ್ಮದು ಅಲ್ಲಿ ಎಲ್ಲವೂ ಇತ್ತು ಆದರೆ ಲಾಂಗ್ ಜಂಪ ಹೈ,ಜಂಪ್ ಪಿಟ್ ಇರಲಿಲ್ಲ.ಅದೂ ಕೂಡಾ ಹೀಗಾಗಿ ಸಧ್ಯ ಶಾಲೆಯಲ್ಲಿ ಸಾಕಾರವಾಗಿದ್ದು ಅತ್ಯಂತ ಹೆಮ್ಮೆಯ ವಿಷಯ
ಈ ಒಂದು ಸೌಲಭ್ಯ ಕುರಿತು ಒಂದೇ ಒಂದು ಮನವಿಗೆ ಸ್ಪಂದಿಸಿ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಶಾಲೆಯ ಅಧ್ಯಕ್ಷರು ಮಾಡಿದರು ಹಾಗೆ ಇವರು ಕೂಡಾ ನಿಂತು ಕೊಂಡು ಮಾಡಿದರು‌

ಶಾಲೆಯ SDMC ಅದ್ಯಕ್ಷರಾದ ವಿನಯ ದೇಸಾಯಿ ನಿವೃತ್ತ ಮುಖ್ಯೋಪಾಧ್ಯಾಯರಾದ P V ದೇಸಾಯಿ ಹಾಗೂ ಸದಸ್ಯರು,ಜೊತೆಗೆ ನಮ್ಮ ಮುಖ್ಯೋ ಪಾಧ್ಯಾಯರು ಹಾಗೂ ನಮ್ಮ ವ್ರತ್ತಿ ಬಾಂಧವರಿಗೆ ಅನಂತ ಕೋಟಿ ಧನ್ಯವಾದಗಳನ್ನು ಕುರಹಟ್ಟಿ ಅವರು ಸಲ್ಲಿಸಿ ಸುಸಜ್ಜಿತ ವಾದ ಲಾಂಗ್ ಜಂಪ್ ಅಂಕಣ ನಿರ್ಮಾಣ ಮಾಡಿ ಶಾಲೆಗೆ ನೆನಪಿನ ಕೊಡುಗೆ ನೀಡಿ ವರ್ಗಾವಣೆ ಗೊಂಡರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.