ಆನವಟ್ಟಿ –
ಎಸ್ ಎಸ್ ಎಲ್ ಸಿ ಪರೀಕ್ಷೆ ಇದ್ದರೂ ಕೂಡಾ ಬೇರೊಂದು ಕಾರಣವನ್ನು ಹೇಳಿ ಪರೀಕ್ಷೆಯಿಂದ ಗೈರಾಗುತ್ತಿದ್ದ ಬಾಲಕನನ್ನು ಹುಡುಕಾಡಿ ಕರೆದು ಕೊಂಡು ಬಂದು ಪರೀಕ್ಷೆ ಬರೆಸಿದ ಘಟನೆ ಶಿವಮೊಗ್ಗ ದಲ್ಲಿ ನಡೆದಿದೆ.
ಜಿಲ್ಲೆಯ ಆನವಟ್ಟಿ ಸಮೀಪದ ಜಡೆ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಮಹೇಶ್ ಎಚ್. ಕುಂಟು ನೆಪ ಹೇಳಿ ಪರೀಕ್ಷೆಯಿಂದ ಗೈರಾಗುತ್ತಿದ್ದನು. ಈ ಒಂದು ವಿಚಾರವನ್ನು ತಿಳಿದ ಶಿಕ್ಷಕರು ಸುರಿಯುವ ಮಳೆ ಯಲ್ಲೇ ಆತನನ್ನು ಹುಡುಕಾಡಿ ಕರೆದುಕೊಂಡು ಬಂದರು. ಪರೀಕ್ಷಾ ಭಯದಿಂದಾಗಿ ತನ್ನ ಆರೋಗ್ಯ ಸರಿ ಇಲ್ಲ ಎಂದು ಕುಂಟು ನೆಪ ಹೇಳಿ ಆಸ್ಪತ್ರೆಗೆ ಹೋಗುವುದಾಗಿ ತಿಳಿಸಿದ್ದ.ಜಡೆ ಆಸ್ಪತ್ರೆಗೆ ಹೋಗು ವುದಾಗಿ,ನಂತರ ಆನವಟ್ಟಿ ಆಸ್ಪತ್ರೆ ಹೋಗುತ್ತೇನೆ ಎಂದು ತಿಳಿಸಿದ್ದ.ಬಳಿಕ ಪರೀಕ್ಷೆಗೆ ಬಾರದೆ ಅಲೆದಾ ಡುತ್ತಿದ್ದನು.
ವಿಷಯ ತಿಳಿದ ಶಿಕ್ಷಕರಾದ ಶಂಕರ ಗೌಡ ಹಾಗೂ ಮನೋಜ್ ಕುಮಾರ್ ಸುರಿಯುವ ಮಳೆಯಲ್ಲೇ ಜಡೆ, ಆನವಟ್ಟಿ ಆಸ್ಪತ್ರೆ ಸೇರಿ ಇತರೆಡೆ ಬೈಕ್ ಲ್ಲಿ ಹುಡುಕಿದ್ದಾರೆ.ಅಂತಿಮವಾಗಿ ಮಂಗಾಪುರ ರಸ್ತೆ ಮಧ್ಯೆ ಸಿಕ್ಕ ವಿದ್ಯಾರ್ಥಿಯನ್ನು ಶಾಲೆಗೆ ಕರೆತಂದು ಪರೀಕ್ಷೆ ಬರೆಯಲು ಕೂರಿಸಿ ಬರೆಸಿದರು. ಇದರೊಂ ದಿಗೆ ಕೇವಲ ಬೋಧನೆ ಅಷ್ಟೇ ಸಾಮಾಜಿಕ ಜವಾ ಬ್ದಾರಿಯನ್ನು ಏನೆಂಬುದನ್ನು ಇವರು ತೊರಿಸಿ ಕೊಟ್ಟರು.