ಬೆಂಗಳೂರು –
ಪಠ್ಯಪುಸ್ತಕ ದ ಲೋಪ ದೋಷ ವನ್ನು ಸರಿಪಡಿಸುವ ಕೆಲಸ ಶಿಕ್ಷಣ ಇಲಾಖೆಯಿಂದ ಆರಂಭಗೊಂಡಿದೆ ಹೌದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್,ಸಮಾಜ ಸುಧಾರಕ ಬಸವಣ್ಣ ಸೇರಿದಂತೆ ಹಲವು ದಾರ್ಶನಿಕರಿಗೆ ಸಂಬಂಧಿಸಿದ ಪಠ್ಯಗಳಲ್ಲಿನ ಆಕ್ಷೇಪಾರ್ಹ ವಿಚಾರಗಳನ್ನು ಸಪರಿಸುವ ಪ್ರಕ್ರಿಯೆಯನ್ನು ಇಲಾಖೆ ಆರಂಭ ಮಾಡಿದೆ
ಶಿಕ್ಷಣ ಇಲಾಖೆಯ ಪ್ರಮುಖ ಅಧಿಕಾರಿಗಳಿಗೇ ಪಠ್ಯ ಲೋಪ ಸರಿಪಡಿಸುವ ಅಧಿಕಾರ ನೀಡಲಾಗಿದೆ.
ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಸಮಿತಿ ಪರಿಷ್ಕರಿಸಿರುವ 1 ರಿಂದ 10 ನೇ ತರಗತಿವರೆಗಿನ ಕನ್ನಡ ಪ್ರಥಮ, ದ್ವಿತೀಯ ಹಾಗೂ ತೃತೀಯ ಭಾಷಾ ವಿಷಯದ ಪಠ್ಯಗಳು ಹಾಗೂ 6 ರಿಂದ 10 ನೇ ತರಗತಿವರೆಗಿನ ಸಮಾಜ ವಿಜ್ಞಾನ ಪಠ್ಯ ಪುಸ್ತಕಗಳಲ್ಲಿರುವ ಆಕ್ಷೇಪಾರ್ಹ ಅಂಶಗಳನ್ನು ಪರಿಷ್ಕರಿಸಿ ಲೋಪಗಳಾಗಿದ್ದರೆ ಸರಿಪಡಿ ಸಲು ಅಧಿಕಾರಿಗಳಿಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸೂಚನೆ ನೀಡಿದ್ದಾರೆ.
ಇನ್ನು ಪಠ್ಯದಲ್ಲಿ ಪ್ರಮುಖವಾಗಿ ಅಂಬೇಡ್ಕರ್ ಅವರ ಬಗೆಗಿನ ಪಾಠದಲ್ಲಿ ಬಿಟ್ಟು ಹೋಗಿರುವ ಸಂವಿಧಾನ ಶಿಲ್ಪಿ ಗೌರವವನ್ನು ಮರು ಸೇರ್ಪಡೆ ಮಾಡುವುದು ಮತ್ತು ಕಡಿತಗೊಳಿಸಿರುವ ಅವರ ಜನನ,ಊರು,ತಂದೆ-ತಾಯಿ ಇತರ ಮಾಹಿತಿಯನ್ನು ಹಿಂದೆ ಇದ್ದಂತೆ ಸೇರಿಸಲು ಸೂಚಿಸ ಲಾಗಿದೆ.