ಮಂಗಳೂರು –
ಮಂಗಳೂರು ನಗರದ ಎಂ.ಜಿ ಸಿಗ್ನಲ್ ಬಳಿ ಕಾರೊಂದು ಏಕಾಏಕಿ ಕೆಟ್ಟು ನಿಂತಿತು.ಹೀಗೆ ಕೆಟ್ಟು ನಿಂತಿದ್ದನ್ನು ನೋಡಿ ಗಮನಿಸಿದ ಕರ್ತವ್ಯ ನಿರತ ಪಾಂಡೇಶ್ವರ ಟ್ರಾಫಿಕ್ ಪೊಲೀಸ್ ಹೆಡ್‌ಕಾನ್ಸೆಬಲ್ ವಿಲ್ಸನ್ ಫೆರ್ನಾಂಡಿಸ್ ಒಬ್ಬರೇ ಬಂದು ಕಾರನ್ನು ಹಿಂದಕ್ಕೆ ತಳ್ಳಿ ಸಂಚಾರ ಸುಗಮ ಗೊಳಿಸಿದ್ದಾರೆ

ತಾವೊಬ್ಬರು ಪೊಲೀಸ್ ಪೇದೆ ಎನ್ನೊದನ್ನು ಬದಿಗಿಟ್ಟು ಕರ್ತವ್ಯದ ನಡುವೆಯೂ ಸಾಮಾಜಿಕ ಜವಾಬ್ದಾರಿ ಏನು ಎಂಬೊಂದನ್ನು ಇದರೊಂದಿಗೆ ಇವರು ತೋರಿಸಿಕೊಟ್ಟಿ ದ್ದಾರೆ.ಅವರ ಮಾನವೀಯ ಗುಣಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ
