ಕೊಡಗು –
ರಸ್ತೆ ಕಾಮಗಾರಿ ವಿಚಾರ ಕುರಿತಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಜಿಲ್ಲಾ ಪಂಚಾಯತನ ಮುಖ್ಯ ಇಂಜನೀ ಯರ್ ರೊಬ್ಬರು ಎಸಿಬಿ ಬಲೆಗೆ ಬಿದ್ದ ಘಟನೆ ಕೊಡಗಿ ನಲ್ಲಿ ನಡೆದಿದೆ.ಹೌದು ಕೊಡಗು ಪಂಚಾ ಯತ್ ರಾಜ್ ಇಲಾಖೆ ಮೇಲೆ ಎಸಿಬಿ ದಾಳಿ ನಡೆದಿದೆ.
ಎಸಿಬಿ ಡಿವೈಎಸ್ಪಿ ತಿಪ್ಪಣ್ಣ ನೇತೃತ್ವದಲ್ಲಿ ಈ ಒಂದು ದಾಳಿ ನಡೆದಿದೆ.ಕೊಡಗು ಪಂಚಾಯತ್ ರಾಜ್ ಇಲಾಖೆ ಮುಖ್ಯ ಎಂಜಿಯರ್ ಮೇಲೆ ಈ ಒಂದು ದಾಳಿ ನಡೆದಿದೆ.ಮುಖ್ಯ ಎಂಜಿನಿಯರ್ ಶ್ರೀಕಂಠ ಯ್ಯ ಎಸಿಬಿ ಬಲೆಗೆ ಬಿದ್ದವರಾಗಿದ್ದಾರೆ.1.92 ಲಕ್ಷ ರೂಪಾಯಿ ಲಂಚವನ್ನು ಸ್ವೀಕರಿಸುತ್ತಿದ್ದ ಶ್ರೀಕಂಠ ಯ್ಯ ಮತ್ತು ಇನ್ನೊರ್ವ ಎಂಜಿಯರ್ ತೌಸಿಫ್ ಕೂಡ ಎಸಿಬಿ ಬಲೆಗೆ ಬಿದ್ದಿದ್ದಾರೆ.
75 ಸಾವಿರ ಲಂಚ ಪಡೆದಿದ್ದ ಎಂಜಿನಿಯರ್ ಗಳು ರಸ್ತೆ ಕಾಮಗಾರಿ ಗುತ್ತಿಗೆ ಕೆಲಸದ ಸಂಬಂಧ ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿಯನ್ನು ಮಾಡಲಾಗಿದೆ. ನಂದ ಎಂಬುವರಿಂದ ಲಂಚ ಸ್ವೀಕರಿಸಿದ ವೇಳೆ ದಾಳಿಯಾಗಿದೆ. ಒಟ್ಟು 2.67 ಲಕ್ಷ ಲಂಚವನ್ನು ಪಡೆಯುತ್ತಿದ್ದರು ಅಧಿಕಾರಿಗಳು.ಹಿಂದೆಯೂ ಕೂಡಾ ಅಕ್ರಮ ಹಣ ವರ್ಗಾವಣೆಯಲ್ಲಿ ಸಸ್ಪೆಂಡ್ ಆಗಿದ್ದರು ಶ್ರೀಕಂಠಯ್ಯ ಕೋಡಗು ಮತ್ತು ಮೈಸೂರು ವಿಭಾಗದ ಎಸಿಬಿ ಅಧಿಕಾರಿಗಳಿಂದ ಜಂಟಿ ಕಾರ್ಯಾಚರಣೆ ನಡೆದಿದೆ.