ಧಾರವಾಡ –
ಧಾರವಾಡ: ಹು-ಧಾ ಮುಖ್ಯ ರಸ್ತೆಯಲ್ಲಿರುವ ಸಂಜೀವಿನಿ ಗಾರ್ಡನ್ ಬಳಿಯಿರುವ ಐಷಾರಾಮಿ ಹೊಟೇಲ್ ನಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯ ಕ್ರಮದಲ್ಲಿ ಕಳ್ಳರು ಲಕ್ಷಾಂತರ ರೂ. ಮೌಲ್ಯದ ವಜ್ತ, ಚಿನ್ನ ಸಹಿತ ನಗದನ್ನು ದೋಚಿ ಪರಾರಿಯಾ ಗಿದ್ದಾರೆ ಈ ಒಂದು ಕಳ್ಳತನದ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬುಧವಾರ ಇಲ್ಲಿನ ಓಸಿಯನ್ ಪರ್ಲ್ ಹೊಟೇಲ್ ನಲ್ಲಿ ಸಣ್ಣ ನೀರಾವರಿ ಇಲಾಖೆಯ ಎಕ್ಸಿಕ್ಯುಟಿವ್ ಇಂಜಿನಿಯರ್ ಗಂಗಾಧರಪ್ಪ ಪಟ್ಟಣಶೆಟ್ಟಿ ಎಂಬು ವವರ ಪುತ್ರನಾದ ಡಾ. ಶರಣಪ್ಪ ಹಾಗೂ ಹುಬ್ಬಳ್ಳಿ ಅಧ್ಯಾಪಕನಗರದ ಅರುಣಕುಮಾರ್ ಗಿರಿಯಾ ಪುರ ಅವರ ಪುತ್ರಿ ಡಾ. ಪೂಜಾ ಅವರ ಅವರ ಮದುವೆಯ ಕಾರ್ಯಕ್ರಮದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.
ಮದುವೆ ಸಂಭ್ರಮದಲ್ಲಿದವರಿಗೆ ಚಳ್ಳೆ ಹಣ್ಣು ತಿನ್ನಿಸಿದ ಕಳ್ಳರು ಸುಮಾರು ೮೦೦ ಗ್ರಾಂ ಚಿನ್ನ, ಲಕ್ಷಾಂತರ ರೂ. ಮೌಲ್ಯದ ವಜ್ರ ಹಾಗೂ ಅಂದಾಜು ೫೦ ಲಕ್ಷ ರೂಪಾಯಿ ನಗದನ್ನು ತನ್ನ ಬ್ಯಾಗಿನಲ್ಲಿ ಹಾಕಿಕೊಂಡು ಹೋಗುವ ದೃಶ್ಯ ಸೆರೆಯಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
ಧಾರವಾಡ ವಿದ್ಯಾಗಿರಿ ಠಾಣೆಯ ಪೊಲೀಸರು ಪ್ರಕರಣದ ಕುರಿತು ವಿಷಯ ಸಂಗ್ರಹ ಮಾಡು ತ್ತಿದ್ದು, ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ …..