ಹೊಸಪೇಟೆ –
ಸಾಮಾನ್ಯವಾಗಿ ಮನೆ,ಬೈಕ್ ಕಾರು,ಇಲ್ಲವೇ ಅಂಗಡಿ ಹೀಗೆ ಏನಾದರೂ ಕಳ್ಳತನ ಮಾಡೊದನ್ನ ಕೇಳಿದ್ದೇವೆ ನೋಡಿದ್ದೇವೆ ಆದರೆ ಇಲ್ಲೊಂದು ಊರಿನಲ್ಲಿ ಗ್ರಾಮದಲ್ಲಿ ಬೆಳೆಯಲಾಗಿದ್ದ ಜೋಳಕ್ಕೇ ಕಣ್ಣ ಹಾಕಿದ್ದಾರೆ. ಹೌದು ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ನಂದಿಬೇವೂರು ಗ್ರಾಮದಲ್ಲಿ ಇಂಥಹದೊಂದು ಕಳ್ಳತನ ನಡೆದಿದೆ.

ಗ್ರಾಮದ ಮಂಜುನಾಥ ಎಂಬುವವರ ಜಮೀನಿನಲ್ಲಿ ಕಳ್ಳತನವಾಗಿದೆ. ಎರಡೂವರೆ ಎಕರೆ ಹೈಬ್ರೀಡ್ ಜೋಳವನ್ನು ಬೆಳೆದಿದ್ದರು. ಕಷ್ಟ ಪಟ್ಟು ಈ ಒಂದು ಎರಡೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಹೈಬ್ರೀಡ್ ಜೋಳವನ್ನು ಕಳ್ಳರು ಕಳ್ಳತನ ಮಾಡಿದ್ದಾರೆ.ಕಟಾವಿಗೆ ಬಂದಿದ್ದ ಹೈಬ್ರೀಡ್ ಜೋಳವನ್ನು ಕಳ್ಳತನ ಮಾಡಿದ್ದಾರೆ. ಜಮೀನಿನಲ್ಲಿಯೇ ಬೆಳೆಯನ್ನು ಕಟಾವು ಮಾಡಿಕೊಂಡು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ

ಇನ್ನೂ ಕಳ್ಳತನ ಮಾಡಿ ಅಳಿದುಳಿದ ಬೆಳೆಯನ್ನು ಸಂಪೂರ್ಣವಾಗಿ ನಾಶ ಮಾಡಿದ್ದಾರೆ ಕಿಡಿಗೇಡಿಗಳು.ಗ್ರಾಮದ ಸಂಭಂದಿಯೊಬ್ಬರ ಪರವಾಗಿ ಗ್ರಾಮ ಪಂಚಾಯತ ಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದರಂತೆ ಮಂಜುನಾಥ ಸಂಭಂದಿಗಳು. ವರ್ಷದ ಕುಟುಂಬದ ತುತ್ತಿನ ಚೀಲ ತುಂಬಿಸುವ ಸಂಬಂಧ ಬೇಸಿಗೆ ಬೆಳೆಯಾಗಿ ಹೈಬ್ರೀಡ್ ಜೋಳ ಬೆಳೆದಿದ್ದ ಮಂಜುನಾಥ
ಕುಟುಂಬ ಕಳೆದ ರವಿವಾರ ಜಮೀನಿಗೆ ನುಗ್ಗಿದ ಕಿಡಿಗೇಡಿಗಳು ಸಾಧ್ಯವಾದಷ್ಟು ಜೋಳದ ತೆನೆ ಕಳ್ಳತನ ಮಾಡಿ ನಂತರ ಇನ್ನುಳಿದ ಜೋಳವನ್ನ ನಾಶ ಮಾಡಿದ್ದಾರೆ ಕಿಡಿಗೇಡಿಗಳು. ಕಿಡಿಗೇಡಿಗಳನ್ನ ಪತ್ತೆಹಚ್ಚಿ ನ್ಯಾಯ ಒದಗಿಸುವುದರ ಜೊತೆಗೆ ಸೂಕ್ತ ಪರಿಹಾರ ನೀಡುವಂತೆ ರೈತ ಮಂಜುನಾಥ ಮತ್ತು ಕುಟುಂಬದವರು ಒತ್ತಾಯವನ್ನು ಮಾಡಿದ್ದಾರೆ.