ಚಾಮರಾಜನಗರ –
ರಾಜ್ಯ ಸರ್ಕಾರದಲ್ಲಿ ನಾಲ್ವರು ಹುಚ್ಚ ಸಚಿವರಿದ್ದಾರೆ ಹೀಗೆಂದು ವಾಟಾಳ್ ನಾಗರಾಜ್ ಹೇಳಿದರು. ಚಾಮರಾಜನಗರ ದಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರದಲ್ಲಿ ನಾಲ್ವರು ಹುಚ್ಚ ಸಚಿವರಿದ್ದಾರೆ ಎಂದು ಕನ್ನಡ ಚಳವಳಿ ನಾಯಕ ಮಾಜಿ ಶಾಸಕ ವಾಟಾಳ್ ನಾಗರಾಜ್ ಚಾಮರಾಜನಗರದಲ್ಲಿ ಹೇಳಿದರು.

ಚಾಮರಾಜನಗರಕ್ಕೆ ಆಗಮಿಸಿದ ವಾಟಾಳ್ ನಾಗ ರಾಜ್ ಚಾಮರಾಜೇಶ್ವರ ದೇವಾಲಯದ ಮುಂಭಾ ಗದಲ್ಲಿ ಇಡುಗಾಯಿ ಹೊಡೆದ ಬಳಿಕ ಮಾತನಾಡಿ ಕೊರೊನಾ ಸೊಂಕಿನ ಹಿಂದೆಯೇ ಕಪ್ಪು ಶಿಲೀಂದ್ರ ಸಾಂಕ್ರಾಮಿಕ ರೋಗ ಹರಡುತ್ತಿದೆ. ಇಂತಹ ಸಾಂಕ್ರಾ ಮಿಕ ರೋಗವನನ್ನು ನಿಯಂತ್ರಣ ಮಾಡಲು ರಾಜ್ಯ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿ ದರು.
ಇನ್ನೂ ರಾಜ್ಯ ಸರ್ಕಾರದಲ್ಲಿ ಸುಧಾಕರ್ ,ಅಶೋಕ್, ಅಶ್ವಥ್ ನಾರಾಯಣ್ ಹಾಗೂ ಬಸವರಾಜ್ ಬೊಮ್ಮಾಯಿ ಯಂತಹ ಹುಚ್ಚರಿದ್ದಾರೆ ಎಂದು ಲೇವ ಡಿ ಮಾಡಿದ ವಾಟಾಳ್ ನಾಗರಾಜು,ಇಂತಹ ವರ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪ ಹೇಗೆ ಆಡ ಳಿತ ನಡೆಸುತ್ತಿದ್ದಾರೆ ಗೊತ್ತಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಒಂದು ತಿಂಗಳಲ್ಲೇ 9 ಸಾವಿರಕ್ಕೂ ಅಧಿಕ ಮಂದಿ ಕೋರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾ ರೆ. ರಾಜ್ಯದಲ್ಲಿ ಸೋಂಕು ಮಿತಿ ಮೀರುತ್ತಿದೆ. ಸೋಂಕು ನಿಯಂತ್ರಣ ಮಾಡಲು ಸರ್ಕಾರ ವಿಫಲ ವಾಗಿದೆ ಸಾರ್ವಜನಿಕರಿಗೆ ಲಸಿಕೆ ನೀಡಲು ಸಾಧ್ಯವಾ ಗದ ಸ್ಥಿತಿಯಲ್ಲಿದೆ ರಾಜ್ಯ ಸರ್ಕಾರ ಇದೆ ಎಂದು ವಾಟಾಳ್ ನಾಗರಾಜ್ ಹೇಳಿದರು