ನವದೆಹಲಿ –
7ನೇ ವೇತನ ಆಯೋಗದಕ್ಕಿಂತ ಹಲವು ಬದಲಾ ವಣೆಗಳಿವೆ 8ನೇ ವೇತನ ಆಯೋಗದಲ್ಲಿ ಘೋಷಣೆಯ ನಿರೀಕ್ಷೆಯಲ್ಲಿ ಕೇಂದ್ರ ಸರ್ಕಾರಿ ನೌಕರರು ಹೌದು ಸಧ್ಯ ಕೇಂದ್ರ ಸರ್ಕಾರಿ ನೌಕರರು 7ನೇ ವೇತನ ಆಯೋಗದಂತೆ ವೇತನ ವನ್ನು ತಗೆದುಕೊಳ್ಳುತ್ದಿದ್ದಾರೆ.ಈ ಒಂದು ಆಯೋಗದ ಜಾರಿಗೆಯಂತೆ ವೇತನ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ.
ಈ ನಡುವೆ 7ನೇ ವೇತನ ಆಯೋಗಕ್ಕೆ ಹೋಲಿ ಸಿದರೆ 8ನೇ ವೇತನ ಆಯೋಗದಲ್ಲಿ ಹಲವು ಬದಲಾವಣೆಗಳಿಂದ ಕೂಡಿದೆ ಎಂಬ ಮಾತು ಗಳು ಕೇಳಿ ಬರುತ್ತಿವೆ.ಹೀಗಾಗಿ ಸಾಕಷ್ಟು ಪ್ರಮಾ ಣದಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ. ಫಿಟ್‌ಮೆಂಟ್ ಅಂಶಕ್ಕೆ ಸಂಬಂಧಿಸಿದಂತೆ ಕೆಲವು ಬದಲಾವಣೆಗಳೂ ಇರಬಹುದು.
ಇಲ್ಲಿಯವರೆಗೆ ಸರ್ಕಾರವು 10 ವರ್ಷಕ್ಕೊಮ್ಮೆ ವೇತನ ಆಯೋಗವನ್ನ ಸ್ಥಾಪಿಸುತ್ತಿದೆ ಎಂದು ತಿಳಿದಿದೆ.7ನೇ ವೇತನ ಆಯೋಗಕ್ಕೆ ಹೋಲಿಸಿ ದರೆ 8ನೇ ವೇತನ ಆಯೋಗದ ನೌಕರರು ಹೆಚ್ಚಿನ ವೇತನ ಪಡೆಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.ಎಲ್ಲವೂ ಸರಿಯಾಗಿ ನಡೆದರೆ ಉದ್ಯೋಗಿಗಳ ಸಂಬಳವು ಒಂದೇ ಬಾರಿಗೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತದೆ.
ಉದ್ಯೋಗಿಗಳ ಫಿಟ್‌ಮೆಂಟ್ ಅಂಶವು 3.68 ಪಟ್ಟು ಹೆಚ್ಚಾಗುತ್ತದೆ ಅಲ್ಲದೆ ಸೂತ್ರವನ್ನು ಲೆಕ್ಕಿ ಸದೆ ನೌಕರರ ಮೂಲ ವೇತನದಲ್ಲಿ 44.44% ಹೆಚ್ಚಳವಾಗಬಹುದು.ಹೀಗಾಗಿ ಹೊಸ ವೇತನ ಆಯೋಗ ಜಾರಿಗಾಗಿ ನೌಕರರು ಹೋರಾಟ ನಡೆಸುತ್ತಿದ್ದು ಏನೇನಾಗಲಿದೆ ಏನೇನು ಇರಲಿದೆ ಏನೇನು ಹೊಸದಾಗಿ ನೌಕರರ ಕೈಗೆ ಸೇರಲಿದೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ನವದೆಹಲಿ…..