ವಿಜಯಪುರ –
ಹಾವು ಚೇಳುಗಳು ಸಿಎಂ ಮನೆಯಲ್ಲಿಯೇ ಇವೆ ಎನ್ನುತ್ತಾ ಮುಖ್ಯಮಂತ್ರಿ ಮತ್ತು ಅವರ ಮಗನ ವಿರುದ್ದ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತೊಮ್ಮೆ ವಾಗ್ದಾಳಿ ಮಾಡಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಈಗ ಸಿಎಂ ಅವರನ್ನು ಹಿಡಿದಿಟ್ಟುಕೊಂಡಿದ್ದಾರೆ ಯಡಿಯೂರಪ್ಪ ಪ್ರತಿಪಕ್ಷ ನಾಯಕರಾಗಿದ್ದಾಗ ಅವರ ನಿವಾಸದಲ್ಲಿ ಯಾರೂ ಇರತಿರಲಿಲ್ಲ ಈಗ ಸಿಎಂ ಆದ ನಂತರ ಅವರ ಇಡೀ ಕುಟುಂಬ ಬಂದು ಅವರ ನಿವಾಸ ಸೇರಿ ಬಿಟ್ಟಿದೆ ಅವರ ಕುಟುಂಬದಿಂದ ಸಿಎಂ ಹೆಸರು ಕೆಡುತ್ತಿದೆ ಯಡಿಯೂರಪ್ಪ ಸಂಪೂರ್ಣವಾಗಿ ಬದಲಾಗಿದ್ದಾರೆ ವಿಶೇಷವಾಗಿ ವಿಜಯೇಂದ್ರ, ಅವರ ಕುಟುಂಬದವರಿಂದ ಹೆಸರು ಕೆಟ್ಟಿದೆ.
ಅವರ ಚೇಲಾಗಳೆಲ್ಲ, ರಾತ್ರಿ ವ್ಯವಸ್ಥೆ ಮಾಡುವರೆಲ್ಲ ಈಗ ನಿಗಮ, ಮಂಡಳಿ ಅಧ್ಯಕ್ಷ, ನಿರ್ದೇಶಕ ರಾಗಿದ್ದಾರೆ ವಿಜಯೇಂದ್ರನ ದೊಡ್ಡ ತಂಡವಿದೆ ತಮಗೆ ಬೇಡವಾದವರ ನಕಲಿ ಸಿಡಿ ತಯಾರಿಸುವ ಕೇಂದ್ರವಿದೆ ಈ ಬಗ್ಗೆ ತಮ್ಮ ಬಳಿ ಮಾಹಿತಿಯಿದೆ ಹಾವು, ಚೇಳುಗಳು ಪಕ್ಷಕಟ್ಟಿವೆ ಯಡಿಯೂರಪ್ಪ ಹಿಂದೆ ಪಕ್ಷ ಕಟ್ಟಿದಾಗ ಅವರ ಕಾರಿಗೆ ಪೆಟ್ರೋಲ್ ಹಾಕಿದ್ದೇನೆ ಪುತ್ರ ವ್ಯಾಮೋಹದ ಪರಾಕಾಷ್ಟೆ ತಲುಪಿದ್ದಾರೆ ಸುತ್ತೂರ ಶ್ರೀಗಳಿಗೆ ನೇತೃತ್ವ ತೆಗೆದುಕೊಳ್ಳಲು ಹೇಳಿದ್ದಾರೆ ಎಂದರು.
ಇನ್ನೂ ಮೊನ್ನೆ ವೀರಶೈವ ಲಿಂಗಾಯಿತರನ್ನು ಒಡೆಯಲು ಪ್ರಯತ್ನಿಸಿದರು ವಿಫಲವಾಯಿತು ವೀರಶೈವ ಲಿಂಗಾಯಿತರನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಾರೆ ಇದರಿಂದ ಪಕ್ಷಕ್ಕೆ ಹಾನಿಯಾಗುತ್ತದೆ ನಮ್ಮದು ಕಾಂಗ್ರೆಸ್, ಮುಲಾಯಂ ಸಿಂಗ್, ಲಾಲೂ ಪ್ರಸಾದ್, ದೇವೇಗೌಡರಂತೆ ಕುಟುಂಬ ಪಕ್ಷವಲ್ಲ ನಮ್ಮದು ಕಾರ್ಯಕರ್ತರ ಪಕ್ಷ ಪ್ರಧಾನಿಯ ಆಶಯದಂತೆ ಕುಟುಂಬ ರಾಜಕೀಯ ಬಿಡಬೇಕು ಆದ್ದರಿಂದ ವಿಜಯೇಂದ್ರ ಕುಟುಂಬದಲ್ಲಿ ಎಲ್ಲರೂ ರಾಜಕೀಯ ಮಾಡಬಾರದು ಒಬ್ಬರು ಮಾತ್ರ ರಾಜಕೀಯ ಮಾಡಿ ಬೆಂಗಳೂರಿನಲ್ಲಿ ನಿಮಗೆ ಸೇರಿದ ಸಾಕಷ್ಟು ವ್ಯವಹಾರವಿದೆ ಎಂದರು.
ಇನ್ನೂ ನೂರಾರು ಮನೆಗಳಿವೆ ಸಿಎಂ ಮನೆಯಲ್ಲಿ ಕುಳಿತು ವಸೂಲಿ ಮಾಡುವ ಕೆಲಸ, ವರ್ಗಾವಣೆಯನ್ನು ನೀವೇ ಮಾಡುತ್ತಿದ್ದೀರಿ ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಅವರಿಗೇನೂ ತಿಳಿಯುತ್ತಿಲ್ಲ ಅದನ್ನು ನಿಮ್ಮ ಇಡೀ ಕುಟುಂಬ, ಸುಮಾರು 35 ಜನ ಸಿಎಂ ಗೃಹ ಕಚೇರಿಯಲ್ಲಿ ಕುಳಿತುಕೊಂಡು ವ್ಯವಹಾರ ಮಾಡುತ್ತಿದ್ದೀರಿ ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರ ಮಾಡಿದ್ದೀರಿ ವಿಶೇಷ ವಿಮಾನದಲ್ಲಿ ಮೊನ್ನೆ ಇಡೀ ಕುಟುಂಬ ಮಾರಿಷಸ್ ಗೆ ವಿಶೇಷ ವಿಮಾನ ತೆಗೆದುಕೊಂಡು ಹೋಗಿದ್ದೀರಿ ಅಲ್ಲಿಗೆ ಯಾಕೆ ಹೋಗಿದ್ದೀರಿ? ಏನು ಕೆಲಸವಿತ್ತು? ಹಣದ ವ್ಯವಹಾರ ಇತ್ತು ? ನಮ್ಮ ಹೋರಾಟ ತತ್ವಾಧಾರಿತ ಹೋರಾಟ ಯಡಿಯೂರಪ್ಪ ಬಹಳ ದುಡಿದಿದ್ದಾರೆ ಅವರನ್ನು ಮುಕ್ತರಾಗಿ ಕೆಲಸ ಮಾಡಲು ಬಿಡಿ ಅವರು ಸಿಎಂ ಆದ ಮೇಲೆ ಯಾಕೆ ಅವರ ನಿವಾಸದಲ್ಲಿ ಉಳಿದಿದ್ದೀರಿ? ವಿಜಯೇಂದ್ರನ ಸರ್ವಾಧಿಕಾರ, ದುರಹಂಕಾರ ಬಗ್ಗೆ ಎಲ್ಲ ಶಾಸಕರ ಅಸಮಾಧಾನವಿದೆ ಕೆಲವು ಸಚಿವರು ವಿಜಯೇಂದ್ರ ಬಳಿ ಹೋದರೆ ಕುಳಿತುಕೊಳ್ಳಲು ಕುರ್ಚಿ ಕೂಡ ಇಲ್ಲ ಅಧಿಕಾರಕ್ಕಾಗಿ ಎಲ್ಲರೂ ಸುಮ್ಮನಿದ್ದಾರೆ ನಕಲಿ ಫೇಸ್ ಬುಕ್ ಅಕೌಂಟ್ ಮೂಲಕ ವಿಜಯೇಂದ್ರ ತಮ್ಮ ವಿರುದ್ಧ ಕಮೆಂಟ್ ಹಾಕುತ್ತಾರೆ ಯಡಿಯೂರಪ್ಪ ಅವರ ಇಡೀ ಕುಟುಂಬ ಲೂಟಿ ಮಾಡುತ್ತಿದೆ ಪ್ರಧಾನಿ ಪ್ರಕಾರ ನಾ ಖಾವೂಂಗಾ, ನಾ ಖಾನೆ ದೂಂಗಾ ಅಂತಾರೆ ಅವರ ಆಶಯದಂತೆ ನಾನು ಹೋರಾಟ ಮಾಡುತ್ತಿದ್ದೇನೆ ಎನ್ನುತ್ತಾ ಮತ್ತೆ ವಿಜಯಪುರದಲ್ಲಿ ಯತ್ನಾಳ ವಾಗ್ದಾಳಿ ಮಾಡಿದರು.