ಬೆಂಗಳೂರು –
ಶಿಕ್ಷಕರ ವರ್ಗಾವಣೆ ವಿಚಾರ ಕುರಿತಂತೆ ಕೊನೆಯ ಪ್ರಯತ್ನ ಎಂಬಂತೆ ನಾಳೆ ರಾಯಚೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಶಿಕ್ಷಕರು ಸೇರಲು ನಿರ್ಧಾರವನ್ನು ತಗೆದುಕೊಂಡಿದ್ದಾರೆ. ರಾಯಚೂರು ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ನಾಳೆ ನಗರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರು ಸೇರಿದಂತೆ ಹಲವರು ಆಗಮಿಸುತ್ತಿದ್ದಾರೆ.
ಈ ಒಂದು ಹಿನ್ನಲೆಯಲ್ಲಿ ರಾಯಚೂರು ಚಲೋ ವೇದಿಕೆಯ ಹೋರಾಟದ ಮುಖಂಡರಾಗಿರುವ ಶಿವಕುಮಾರ ಕಟ್ಟಿಮನಿ ನೇತ್ರತ್ವದಲ್ಲಿ ಈಗಾಗಲೇ ಶಿಕ್ಷಕರ ವರ್ಗಾವಣೆ ವಿಚಾರ ಕುರಿತಂತೆ ತಾರ್ಕಿಕ ವಾದ ಅಂತ್ಯವನ್ನು ಕಾಣಿಸಲು ಏನೇಲ್ಲಾ ಪ್ರಯತ್ನ ವನ್ನು ಹೋರಾಟವನ್ನು ಮಾಡಲಾಗುತ್ತಿದ್ದು ಇದರ ಪ್ರಯತ್ನವಾಗಿ ಕೊನೆಯ ಹೋರಾಟ ಎಂದು ಕೊಂಡು ನಾಳೆ ರಾಯಚೂರಿನಲ್ಲಿ ದೊಡ್ಡ ಪ್ರಮಾಣ ದಲ್ಲಿ ಮಾಡು ಇಲ್ಲವೇ ಮಡಿ ಎಂಬಂತೆ ಹೋರಾಟ ವನ್ನು ಹಮ್ಮಿಕೊಳ್ಳಲಾಗಿದೆ.
ಹೀಗಾಗಿ ನಾಳೆಯ ರಾಯಚೂರು ಚಲೋ ತೀವ್ರ ವಾದ ಮಹತ್ವವನ್ನು ಹುಟ್ಟು ಹಾಕಿದ್ದು ನಾಳೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಂಡು ಏನಾದರೂ ಒಂದು ತಿರ್ಮಾನಕ್ಕೆ ಬರಲಿದ್ದಾರೆ ಎಂಬ ಮಾತುಗಳು ವೇದಿಕೆಯಲ್ಲಿ ಕೇಳಿ ಬರಲಿದ್ದು ಹೀಗಾಗಿ ದಯ ಮಾಡಿ ಶಿಕ್ಷಕ ಬಂಧುಗಳೇ ಇದು ಯಾರ ಕಾರ್ಯ ಕ್ರಮ ಅಲ್ಲ ನಿಮ್ಮ ಬೇಡಿಕೆ ಹಕ್ಕುಗಳಿಗಾಗಿ ಕೇಳುವ ಸಮಯ ನೀವು ಬನ್ನಿ ನಿಮ್ಮವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆದುಕೊಂಡು ಬನ್ನಿ ತಪ್ಪಿಸಬೇಡಿ ಹೆಚ್ಚಿನ ಪ್ರಮಾಣದಲ್ಲಿ ಧ್ವನಿ ಗೂಡಿದರೇ ಹೆಚ್ಚು ಮಹತ್ವ ಅರ್ಥವಾಗುತ್ತದೆ ನೆನಪು ಮಾಡಿಕೊಂಡು ಬನ್ನಿ ಬಂಧುಗಳೇ…….