ಬೆಂಗಳೂರು –
ಹಳೆಗನ್ನಡ ಶುದ್ದ ಕನ್ನಡದಲ್ಲಿ ಬೈಗುಳ ಇಲ್ಲ ಈ ಬಗ್ಗೆ ಸಂಶೋಧನೆ ಮಾಡಲಾಗುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.ಹೊಸಕೋಟೆಗೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಕನ್ನಡ ಭಾಷೆ ಬೆಳವ ಣಿಗೆ ಬಗ್ಗೆ ತಿಳಿದುಕೊಳ್ಳಬೇಕು.ಯಾವುದೇ ರಂಗದಲ್ಲಿ ಕನ್ನಡ ಅಳಿಯಬಾರದು.ನಾಗರೀಕತೆ,ಸಂಸ್ಕೃತಕ್ಕೂ ವ್ಯತ್ಯಾಸ ಗೊತ್ತಿಲ್ಲ.ನಾಗರೀಕತೆ ಇದೀಗ ಬೆಳದಿದೆ. ಮೊದಲು ಬೀಸೋ ಕಲ್ಲು ಹೋಗಿ ಮಿಕ್ಸಿ ಬಂದಿದೆ. ನಾಗರೀ ಕತೆ ಬೆಳದಂತೆ,ಸಂಸ್ಕೃತಿ ಕಳಚಿ ಬಿದ್ದಿದೆ.ನಮ್ಮ ಹತ್ರ ಇರೋದು ನಾಗರಿಕತೇ,ನಾವೇನಾಗಿದ್ದೇವೆ ಅನ್ನೋದು ಸಂಸ್ಕೃತಿ ಎಂದರು
ವಿಶ್ವ ಭೂಪಟದಲ್ಲಿ ಕನ್ನಡಿಗರು ಎಲ್ಲಿ ಇರಬೇಕು ಅನ್ನೋದು ಸಂಶೋಧನೆ ಆಗಬೇಕು ಇದು ನನ್ನ ಆಶಯ.ಕನ್ನಡ ಬಹಳ ಶ್ರೀಮಂತ ಭಾಷೆ.ಕನ್ನಡವನ್ನು ಪ್ರೀತಿ ಮಾಡಬೇಕು. ಹಳೆ ಗನ್ನಡ ಶುದ್ದ ಕನ್ನಡದಲ್ಲಿ ಬೈಗುಳ ಇಲ್ಲ ಈ ಬಗ್ಗೆ ಸಂಶೋ ಧನೆ ಮಾಡಿ ಎಂದು ಬೊಮ್ಮಾಯಿ ಹೇಳಿದ್ದಾರೆ