ಬೆಂಗಳೂರು –
ಬಜೆಟ್‌ನಲ್ಲಿ 7ನೇ ವೇತನ ಆಯೋಗಕ್ಕೆ ದುಡ್ಡಿಲ್ಲ OPS ಜಾರಿಯ ಸುದ್ದಿ ಇಲ್ಲ ಮತ್ತೆ ನಿರಾಸೆ ಮಾಡಿದ ಗ್ಯಾರಂಟಿ ಬಜೆಟ್ ಮುಂದೇನು ರಾಜ್ಯಾಧ್ಯಕ್ಷರೇ…..
ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಿದ್ದು ರಾಜ್ಯದ ಮೂಲೆ ಮೂಲೆಗಳಿಗೂ ಸರ್ವ ಸಮುದಾಯಕ್ಕೂ ಸರ್ವರಿಗೂ ಎಲ್ಲಾ ವರ್ಗದವರಿಗೂ ನಿರೀಕ್ಷೆ ಯಂತೆ ಅಲ್ಪ ಸ್ವಲ್ಪವಾದರೂ ಕೊಡುಗೆಯನ್ನು ನೀಡಿದ್ದಾರೆ.ಈ ನಡುವೆ ರಾಜ್ಯ ಸರ್ಕಾರಿ ನೌಕರ ರಿಗೆ ನಾಡದೊರೆ ಯಾವುದನ್ನು ನೀಡದೆ ನಿರಾಶೆ ಯನ್ನುಂಟು ಮಾಡಿದ್ದಾರೆ.
ಹೌದು ಈ ಬಜೆಟ್ ನಲ್ಲಾದರೂ 7ನೇ ವೇತನ ಆಯೋಗಕ್ಕೆ ವಿಶೇಷ ಅನುದಾನವನ್ನು ಮೀಸ ಲಿಟ್ಟು ಘೋಷಣೆ ಮಾಡುತ್ತಾರೆ, ಚುನಾವಣೆ ಯಲ್ಲಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಹಳೆ ಪಿಂಚಣಿ ಯೋಜನೆಗೆ ಅನುದಾನವನ್ನು ನೀಡಿ ಕೊಡುಗೆ ನೀಡುತ್ತಾರೆಂದು ರಾಜ್ಯ ಸರ್ಕಾರಿ ನೌಕರರು ಅಂದುಕೊಂಡು ತುಂಬಾನಿರೀಕ್ಷೆಯನ್ನು ಇಟ್ಟುಕೊಂಡಿದ್ದರು.
ಆದರೆ ಯಾವ ಆಸೆಯೂ ಯಾವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರಿ ನೌಕರರಿಗೆ ನೀಡಿಲ್ಲ.ಒಂದು ಕಡೆಗೆ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕ್ರರಣೆಗಾಗಿ ಈಗಾಗಲೇ 7ನೇ ವೇತನ ಆಯೋಗವನ್ನು ರಚನೆ ಮಾಡಿ ಬರೊಬ್ಬರಿ ಎರಡು ವರ್ಷಗಳಾಗುತ್ತಾ ಬಂದಿದೆ ಮಾರ್ಚ್ ತಿಂಗಳಿಗೆ ಈ ಒಂದು ಆಯೋಗದ ಅವಧಿ ಮುಗಿಯುತ್ತದೆ ಈಗಾಗಲೇ ಎರಡು ಬಾರಿ ಅವಧಿಯನ್ನು ವಿಸ್ತರಣೆ ಮಾಡಿದ್ದು ಸಧ್ಯ ಮಾರ್ಚ್ ತಿಂಗಳಲ್ಲಿ ಅವಧಿ ಮುಕ್ತಾಯವಾ ಗಲಿದ್ದು ವರದಿ ಸಿದ್ದವಾಗಿದ್ದರು ಕೂಡಾ ಮುಖ್ಯ ಮಂತ್ರಿಯವರು ಯಾಕೇ ವರದಿ ಸ್ವೀಕಾರ ಮಾಡಲು ಹಿಂದೆಟು ಹಾಕುತ್ತಿದ್ದಾರೆ
ಕಾರಣ ಏನು ಬಜೆಟ್ ನಲ್ಲೂ ರಾಜ್ಯ ಸರ್ಕಾರಿ ನೌಕರರಿಗೆ ಅನ್ಯಾಯವಾಗಿದ್ದು ಮತ್ತೆ ಇನ್ನೂ ಯಾವಾಗ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳು ಈಡೇರುತ್ತವೆ ಬಜೆಟ್‌ನಲ್ಲಿ 7ನೇ ವೇತನ ಆಯೋಗಕ್ಕೆ ದುಡ್ಡಿಲ್ಲ,OPS ಜಾರಿಯ ಸುದ್ದಿ ಇಲ್ಲ ಮತ್ತೆ ನಿರಾಸೆ ಮಾಡಿದ ಗ್ಯಾರಂಟಿ ಬಜೆಟ್ ಮುಂದೇನು ರಾಜ್ಯಾಧ್ಯಕ್ಷರೇ ಎಂಬ ಪ್ರಶ್ನೆಯನ್ನು ರಾಜ್ಯದ ಸಮಸ್ತ ಸರ್ಕಾರಿ ನೌಕರರು ಕೇಳುತ್ತಿದ್ದಾರೆ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..